suddibindu.in
ಕುಮಟಾ : ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಜಾನುವಾರುಗಳನ್ನ ರಕ್ಷಣೆ ಮಾಡಿ ಓರ್ವ ಆರೋಪಿ ಹಾಗೂ ವಾಹನವನ್ನ ವಶಕ್ಕೆ ಪಡೆದುಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ಹೊಲನಗದ್ದೆ ಟೋಲ್ ಗೇಟ್ ಬಳಿ ನಡೆದಿದೆ..

ಜೈನುದ್ದೀನ್ ಜಕ್ರಿಯಾ, ಕಾಸರಕೋಡ : ಕೇರಳ ಈತನನ್ನ ಬಂಧಿಸಲಾಗಿದೆ, ಕಂಟೇನರ್ ಚಾಲಕ ಶಾಹಿದ್,‌ಕ್ಲೀನರ್ ಮುಕ್ರಂ ತಲೆ ಮರೆಸಿಕೊಂಡಿದ್ದಾರೆ.ಕಂಟೇನರ್ ವಾಹನದಲ್ಲಿ 21ಜಾನುವಾರುಗಳನ್ನ ಅಕ್ರಮವಾಗಿ ಹಿಂಸಾತ್ಮಕವಾಗಿ ಕಲಘಟಗಿಯಿಂದ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಕುಮಟಾ ಪೊಲೀಸರು ಹೊಳೆಗದ್ದೆ ಟೋಲ್‌ಗೇಟ್ ಬಳಿ ವಾಹನ ತಡೆದಿದ್ದಾರೆ.

ಇದನ್ನೂ ಓದಿ

ನಾಲ್ವರು ಆರೋಪಿಗಳ ಪೈಕಿ ಓರ್ವನನ್ನ ವಶಕ್ಕೆ ಪಡೆದಿದ್ದು, ಇನ್ನೂಳಿದ ಮೂವರು ಪರಾರಿಯಾಗಿದ್ದಾರೆ. ಲಾರಿಯಲ್ಲಿದ್ದ 21ಜಾನುವಾರುಗಳನ್ನ ರಕ್ಷಣೆ ಮಾಡಿದ್ದು, ಆರೋಪಿ ಓರ್ವನನ್ನ ಬಂಧಿಸಲಾಗಿದೆ.ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ