suddibindu.in
ಯಲ್ಲಾಪುರ : ಅರೆಬೈಲ್ ಘಾಟ್ ನಲ್ಲಿ ಕಾರು ದರೋಡೆ ಮಾಡಿದ ಆರೋಪಿಗಳನ್ನ ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾಂಗ್ಲಿಯ ಸೂರಜ್ ಸುಧಾಕರ ಚೌಹಾಣ (30), ರವೀಂದ್ರ ತಂದೆ ಭಜರಂಗ ಮದನಿ, (31) ಬಂಧಿತ ಆರೋಪಿಗಳಾಗಿದ್ದಾರೆ. ಮೇ 23 ರಂದು ರಾಜಸ್ತಾನ್ ಮೂಲದ ಸುರೇಶ ರಾವ್ ಹಿಮ್ಮತ್ ರಾಮಜೀರಾವ್ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸುರೇಶ ರಾವ್ ಮತ್ತು ಅವರ ಸ್ನೇಹಿತ ಸಂಪತ್ ಸೊಲಂಕಿ ಮುಂಬೈದಿಂದ ಮಂಗಳೂರಿಗೆ ಹೋಗುತ್ತಿದ್ದಾಗ ಬಂದ ನಾಲ್ವರು ಅಪರಿಚಿತರು ಅರಬೈಲ್‌ನಲ್ಲಿ ಕಾರು ಅಡ್ಡಗಟ್ಟಿ ಕಾರಿನ ಗ್ಲಾಸ್ ಪುಡಿಗೈದು,3 ಮೊಬೈಲ್ ಪೋನ್ ಕಸಿದು ಕಾರು ಹಾಗೂ ನಮ್ಮ ಕಾರಿನ ಕೀ ಕಸಿದುಕೊಂಡು ನೀವು ಶಿಂಧೆ ಸಾಹೇಬರ ಕಾರಿಗೆ ಓವರಟೇಕ್ ಮಾಡಿಕೊಂಡು ಬಂದಿರಿ. ನಮ್ಮ ಜೋತೆ ಬನ್ನಿ ಅಂತಾ ಅವರ ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಬಳಿಕ ಅರಬೈಲ್ ಘಾಟದಿಂದ ಮರಳಿ ಹುಬ್ಬಳಿ ರಸ್ತೆಗೆ ಒಯ್ದಿದ್ದಾರೆ ನಂತರ ರಸ್ತೆ ಬಧಿಯಲ್ಲಿ ಇಳಿಸಿ ಶಿಂಧೆ ಸಾಹೇಬರು ಹಿಂದೆ ಇದ್ದಾರೆ. ನೀವು ಬಸ್ಸಿನಲ್ಲಿ ಹೋಗಿ ಅಂತಾ ಹೇಳಿ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು.

ಇದನ್ನೂ ಓದಿ

ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪೊಲೀಸರು ಬೆಳಗಾವಿ ಜಿಲ್ಲೆಯಲ್ಲಿ ಅಥಣಿಯಲ್ಲಿ ಆರೋಪಿಗಳನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ಜಯಕುಮಾರ, ಡಿವೈಎಸ್ಪಿ ಎಮ್.ಎಸ್ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿಪಿಐ ರಮೇಶ ಹೆಚ್. ಹನಾಪುರ ನೇತ್ರತ್ವದಲ್ಲಿ ಪಿಎಸ್‌ಐ ಸಿದ್ದಪ್ಪ ಗುಡಿ, ಪಿಎಸ್‌ಐ ವಿಜಯರಾಜ, ಎ.ಎಸ್.ಐ ಆನಂದ ಡಿ ಪಾವಸ್ಥರ ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ರಾಮಾ ಪಾವಸ್ಥರ, ರಾಘವೇಂದ್ರ ಮೂಳೆ, ಸಂತೋಷ ಬಾಳೇರ, ಶೋಭಾ ನಾಯ್ಕ ಅವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.