suddibindu.in
ಶಿರಸಿ : ಕಾರವಾರದ ಬಾಲ ಮಂದಿರಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಇಬ್ಬರೂ ಬಾಲಕಿಯರು ನಾಮಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರ ಗೋಸಾವಿಗಲ್ಲಿಯಲ್ಲಿ ನಡೆದಿದ್ದು, ಈ ಬಗ್ಗೆ ಇಬ್ಬರನ್ನೂ ಅಪಹರಣ ಮಾಡಲಾಗಿದೆ ಎಂದು ದೂರು ದಾಖಲಿಸಲಾಗಿದೆ.
.

ಇದನ್ನೂ ಓದಿ

ಏಳನೇ ತರಗತಿ ಓದುತ್ತಿದ್ದ 14 ವರ್ಷದ ಬಾಲಕಿ ಹಾಗೂ 3ನೇ ತರಗತಿ ಕಲಿಯುತ್ತಿದ್ದ ಬಾಲಕಿ ಇಬ್ಬರೂ ನಾಪತ್ತೆಯಾಗಿದ್ದಾರೆ.ಇವರಿಬ್ಬರೂ ಕಾರವಾರದ ಬಾಲ ಮಂದಿರದಲ್ಲಿ ಕಲಿಯುತ್ತಿದ್ದರು ಎನ್ನಲಾಗಿದೆ.ಇವರೂ ಶನಿವಾರ ಮಧ್ಯಾಹ್ನ 3 ಗಂಟೆಗೆ ಮನೆಯಲ್ಲಿ ತಾವು ಇಬ್ಬರೂ ಕಾರವಾರಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದರು ಎನ್ನಲಾಗಿದೆ. ಆದರೆ ಅತ್ತ ಕಾರವಾರದ ಬಾಲ ಮಂದಿರಕ್ಕೂ ಹೋಗದೆ ಇತ್ತ ಶಿರಸಿಯಲ್ಲಿರು ಮನೆಗೂ ವಾಪಸ್ ಆಗದೆ ನಾಪತ್ತೆಯಾಗಿದ್ದಾರೆ.

ಈ‌ ಬಗ್ಗೆ ಶೋಭಾ ಯುವರಾಜ ಗೋಸಾವಿ ಗಣೇಶನಗರ ಗೋಸಾವಿಗಲ್ಲಿ ಇವರು ಶಿರಸಿ ಪೊಲೀಸ್ ಠಾಣೆಯಲ್ಲಿ ತನ್ನ ಮಗಳು ಹಾಗೂ ಮೈದುನನ ಮಗಳು ನಾಪತ್ತೆಯಾಗಿದ್ದು, ಯಾರೋ ಇವರನ್ನ ಅಪಹರಣ ಮಾಡಿಕೊಂಡು ಹೋಗಿದ್ದು, ತಕ್ಷಣ ಪತ್ತೆಹಚ್ಚುಕೊಂಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.