suddibindu.in
ಶಿರಸಿ : ಲೋಕಸಭಾ ಚುನಾವಣಾ ಪ್ರಚಾರ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸುತ್ತಿದ್ದು, ಆದರೆ ಈ ಸಮಾವೇಶದಲ್ಲಿ ಹಾಲಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರ ಪೋಟೋ ಕೈ ಬಿಡಲಾಗಿದ್ದು, ಇದು ಅನಂತಕುಮಾರ ಅಭಿಮಾನಿಗಳನ್ನ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನಾಗಿದ್ದ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರ ಪೋಟೋ ಕೈ ಬಿಡಲಾಗಿದೆ. ಅನಂತಕುಮಾರ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯಿಂದ ಏಳು ಭಾರಿ ಸ್ಪರ್ಧೆ ಮಾಡಿ ಆರು ಭಾರಿ ಸಂಸದರು ಹಾಗೂ ಒಂದು ಬಾರಿ ಕೇಂದ್ರದ ಮಂತ್ರ ಕೂಡ ಆಗಿದ್ದರು.ಆದರೆ ಬದಲಾದ ರಾಜಕೀಯದಲ್ಲಿ ಈ ಭಾರಿ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ತಪ್ಪಿಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ನೀಡಲಾಗದೆ.
ಇದನ್ನೂ ಓದಿ
- ಗೋಕರ್ಣ ಗುಹೆಯಲ್ಲಿ ಪತ್ತೆಯಾದ ಮಹಿಳೆ ನೋಡಲು ಓಡಿ ಬಂದ ಪ್ರೀಯಕರ
- ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್ಫೀಲ್ಡ್ ಬಂದರಿನ ಅಭಿವೃದ್ಧಿ
- ಕಾಳಿ ನದಿಯಲ್ಲಿ ಜಿಂಕೆಯನ್ನು ಎಳೆದೊಯ್ದ ಮೊಸಳೆ
ಟಿಕೆಟ್ ಕೈ ತಪ್ಪಿದ ಬಳಿಕ ಅನಂತಕುಮಾರ ಹಾಗೂ ಜಿಲ್ಲೆಯಲ್ಲಿರುವ ಅವರ ಲಕ್ಷಾಂತರ ಅಭಿಮಾನಿಗಳ ಅಸಮಧಾನಕ್ಕೂ ಸಹ ಕಾರಣವಾಗಿತ್ತು. ಇದು ಚುನಾವಣೆ ಹತ್ತಿರವಾಗತ್ತಾ ಇದ್ದರೂ ಕೂಡ ಅಸಮಧಾನ ತಣ್ಣಗಾಗಿಲ್ಲ. ಹೀಗಿರುವಗಲೇ ಇದೀಗ ದೇಶದ ಪ್ರಧಾನಿ ಮೋದಿ ಅವರು ಜಿಲ್ಲೆಗೆ ಆಗಮಿಸುವ ಬೃಹತ್ ಬಿಜೆಪಿ ಸಮಾವೇಶದ ವೇದಿಕೆಯಲ್ಲಿ ರಾಜ್ಯದ ಉಳಿದ ಎಲ್ಲಾ ನಾಯಕರ ಪೊಟೋ ಹಾಕಿದ್ದರೂ ಸಹ ಜಿಲ್ಲೆಯ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರ ಪೊಟೋ ಕೈ ಬಿಟ್ಟಿರುವುದು ಇದೀಗ ಅನಂತ್ ಅಭಿಮಾನಿಗಳ ಆಕ್ರೋಶ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ..