suddibindu.in
ಕುಮಟಾ : ಚಲಿಸುತ್ತಿದ್ದ ಸ್ಕೂಟಿಯೊಂದು ಹೆದ್ದಾರಿ ಪಕ್ಕದ ಡಿವೈಡರ್ಗೆ ಡಿಕ್ಕಿ ಹೊಡೆದು ತಂದೆ ಸೇರಿ ಇಬ್ಬರೂ ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಿರ್ಜಾನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡವರು ಬೆಟ್ಕುಳಿಯ ನಿವಾಸಿ ಇಸಾಕ್ ಹಾಗೂ ಆತನ ಇಬ್ಬರೂ ಮಕ್ಕಳು ಎಂದು ತಿಳಿದುಬಂದಿದೆ.ಇವರು ಕುಮಟಾದಿಂದ ಬೆಟ್ಕುಳಿಗೆ ಬರುತ್ತಿರುವಾಗ ಮಿರ್ಜಾನ ಬಳಿ ಹೆದ್ದಾರಿ ಪಕ್ಕದ ಡಿವೈಡರಿಗೆ ಡಿಕ್ಕಿಯಾಗಿದೆ. ಇದರಿಂದಾಗಿ ಸ್ಕೂಟಿ ಚಲಿಸುತ್ತಿ ವ್ಯಕ್ತಿ ಹಾಗೂ ಆತನ ಇಬ್ಬರೂ ಮಕ್ಕಳು ಗಂಭೀರಗೊಂಡಿದ್ದಾರೆ.
ಇದನ್ನೂ ಓದಿ
- Staff Nurse/ಸ್ಟಾಫ್ ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಬಸ್ ನಿಲ್ದಾಣದಲ್ಲಿ ಮೃತಪಟ್ಟ ಭಿಕ್ಷುಕನ ಅಂತ್ಯಸಂಸ್ಕಾರ
- ಕಾರವಾರ ಕ್ರಿಮ್ಸ್ ನಿವೃತ್ತ ನಿರ್ದೇಶಕ ಗಜಾನನ ನಾಯಕನ ವಿರುದ್ಧ ಕ್ರಮಕ್ಕೆ ಸೂಚನೆ
ಗಾಯಗೊಂಡ ಮೂವರನ್ನ 108ವಾಹನದ ಮೂಲಕ ಕುಮಟಾ ಸರಕಾರಿ ಆಸ್ಪತ್ರೆ ರವಾನಿಸಲಾಗಿದ್ದು,ಅಪಘಾತಕ್ಕೆ ಒಳಗಾದವರ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.