suddibindu.in
ಕುಮಟಾ: ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್‌ ನಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳಿಗೆ ಸ್ವಲ್ಪವೂ ಪೈಪೋಟಿ ನೀಡದೆ. ಪಕ್ಷೇತರ ಅಭ್ಯರ್ಥಿಗಳಿಗಿಂತ ಅತೀ ಕಡಿಮೆ ಮತಗಳನ್ನ ಪಡೆದು ಠೇವಣಿ ಕಳೆದುಕೊಂಡಿರುವುದನ್ನ ರಾಜಕೀಯ ಇತಿಹಾಸದಲ್ಲಿ ಎಂದು ಮರೆಯುವಂತಿಲ್ಲ.ಲೋಕಸಭಾ ಚುನಾವಣಾ ಸಂದರ್ಭದಲ್ಲಾದ್ರೂ ಕ್ಷೇತ್ರದಲ್ಲಿ ಸಂಘಟನೆ ಚೇತರಿಸಿಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಪಕ್ಷದ ಕಾರ್ಯಕರ್ತರಲ್ಲಿ ನಿರಾಶೆ ಮೂಡಿಸಿದೆ
.

ಕಳೆದ ವಿಧಾನಸಭಾ ಚುನಾವಣೆ ವೇಳೆ ಕುಮಟಾ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಸೇರಿ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ ಗಾಗಿ ಪೈಪೋಟಿ ನಡೆಸಿದ್ದರು, ಆದರೆ ಪಕ್ಷದ ದೆಹಲಿ ನಾಯಕರು ಸ್ಥಳೀಯ ಯಾವ ಆಕಾಂಕ್ಷಿಗಳನ್ನ ಗಣನೆಗೆ ತೆಗೆದುಕೊಳ್ಳದೆ ಸೋಲುವುದು ಖಚಿತ ಎಂದು ಗೊತ್ತಿದ್ದರು ಸಹ ಕ್ಷೇತ್ರದವರನ್ನ ಬಿಟ್ಟು ಹೊರಗಿನವರಿಗೆ ಟಿಕೆಟ್‌ ನೀಡಿ ಠೇವಣಿ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಯಿತು. ಇದರಿಂದಾಗಿ ರಾಜ್ಯದಲ್ಲಿಯೇ ಪಕ್ಷಕ್ಕೆ ಮುಖಭಂಗವಾಗುವಂತಾಗಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರ, ಸೋತ ಬಳಿಕವಾದ್ರೂ ಕ್ಷೇತ್ರದಿಂದ ದೂರವಾಗಬಹುದು ಎಂದುಕೊಂಡ ನಿಷ್ಠಾವಂತ ಕಾಂಗ್ರೇಸ್‌ ಕಾರ್ಯಕರ್ತರು ಅಂದುಕೊಂಡತೆ ಆಗಿಲ್ಲ ಎಂಬ ಬೇಸರದಲ್ಲಿದ್ದಾರೆ. ಸೋತವರು ಲೋಕಸಭಾ ಚುನಾವಣೆ ಒಳಗಾದರೂ ಪಕ್ಷದ ಹೈಕಮಾಂಡ ಪರ್ಯಾಯ ನಾಯಕರನ್ನ ನೀಡುವ ಮೂಲಕ ಪಕ್ಷ ಸಂಘಟನೆಗೆ ಶಕ್ತಿ ತುಂಬ ಬಹುದು ಅಂದುಕೊಂಡವರ ನಿರೀಕ್ಷೆ ಕೂಡ ಸುಳ್ಳಾಗಿದೆ.

ಇದನ್ನೂ ಓದಿ

ರಾಜ್ಯದಲ್ಲಿ ತಮ್ಮದೆ ಪಕ್ಷ ಅಧಿಕಾರದಲ್ಲಿದ್ದರು ಸಹ ಸೋತ್ತಿರುವ ಅಭ್ಯರ್ಥಿ ಹೈಕಮಾಂಡ ಮೇಲೆ ಒತ್ತಡ ಹಾಕಿ ಟಿಕೆಟ್‌ ಗಿಟ್ಟಿಸಿಕೊಂಡ ಹಾಗೆ ಅಭಿವೃದ್ಧಿ ಕಾಮಗಾರಿಗಳನ್ನ ತಂದು ಕುಮಟಾ ಕ್ಷೇತ್ರದ ಚಿತ್ರಣವನ್ನೆ ಬದಲಿಸಬಹುದು ಅಂದುಕೊಳ್ಳಲಾಗಿತ್ತು, ಕ್ಷೇತ್ರ ಅಭಿವೃದ್ದಿ ಆಗುವ ವಿಚಾರ ಒದಿಗಿಟ್ಟು ತಮ್ಮ ಅಭಿವೃದ್ದಿಯೊಂದೆ ಮೂಲ ಮಂತ್ರ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆಂದು ಪಕ್ಷದ ಮುಖಂಡರೆ ಗಲ್ಲಿಗಲ್ಲಿಯಲ್ಲಿ ಆಡಿಕೊಳ್ಳುತ್ತಿದ್ದಾರೆ.

ಲೋಕಸಭಾ ಚುನಾವಣೆ ಪ್ರಚಾರದ ಅಬ್ಬರ ಜೋರಾಗಿದೆ, ಜಿಲ್ಲೆಯ ಉಳಿದೆಲ್ಲಾ ಕ್ಷೇತ್ರದಲ್ಲಿ ಶಾಸಕರು ಹಾಗೂ ಮುಖಂಡರು ಎಲ್ಲವನ್ನ ಮರೆತು ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಬೇಕೆಂದು ದುಡಿಯುತ್ತಿದ್ದಾರೆ. ಆದರೆ ಕುಮಟಾ ಕ್ಷೇತ್ರದಲ್ಲಿ ಮಾತ್ರ ಸೋತ್ತವರ ಆಟವೇ ಜೋರಾಗಿದೆ.

ಎಲ್ಲೆ ಪ್ರಚಾರಕ್ಕೆ ಹೋಗಬೇಕಾದ್ರೂ ಕೂಡ “ಈ ದೊಣ್ಣೆ ನಾಯಕನ” ಅನುಮತಿ ಬೇಕಂತೆ.ಇದರಿಂದಾಗಿ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಬೇಕೆಂಬ ಹಂಬಲದಲ್ಲಿರುವ ನಿಷ್ಠಾವಂತ ಕಾಂಗ್ರೇಸ್ ಮುಖಂಡರು,ಕಾರ್ಯಕರ್ತರು ಸದ್ಯ ಗೊಂದಲಕ್ಕೆ ಒಳಗಾಗಿದ್ದಾರೆ. ಪಕ್ಷದ ಹೈಕಮಾಂಡ ಜಿಲ್ಲೆಯ ಉಳಿದ ಕ್ಷೇತ್ರಕ್ಕಿಂತ ಕುಮಟಾ ಕ್ಷೇತ್ರದ ಬಗ್ಗೆ ಎಚ್ಚರಗೊಳ್ಳಬೇಕಾದ ಅನಿವಾರ್ಯತೆ ಇದೆ.ಉಳಿದ ಕ್ಷೇತ್ರದಲ್ಲಿ ಎಷ್ಟೇ ಹೆಚ್ಚಿನ ಮತ ಪಡೆದರು ಕುಮಟಾ ಕ್ಷೇತ್ರದಲ್ಲಿ ಮಾತ್ರ ನಿರೀಕ್ಷಿಸಿದಷ್ಟು ಮತಗಳು ಕಾಂಗ್ರೆಸ್ ಕಡೆ ಬರಲಿರುವುದು ತುಂಬ ಕಷ್ಟವಾಗಿದೆ.ಚುನಾವಣೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಅಷ್ಟರೊಳಗೆ ಕುಮಟಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ಗೆ ಮೇಜರ್ ಸರ್ಜರಿ ಆಗಲೇ ಬೇಕಿದೆ..