suddibindu.in
ಭಟ್ಕಳ: ಅನ್ಯಾಯ ಹಾಗೂ ಮೋಸದ ವಿರುದ್ಧ ಈ ಬಾರಿಯ ಚುನಾವಣೆ ನಡೆಯಲಿದೆ.ಮನ ಕೀ ಬಾತ್ ನಲ್ಲಿ ಮನೆಯಲ್ಲಿ ಎ.ಸಿ. ರೂಮ್ ನಲ್ಲಿ ಕುಳಿತು ಜನರನ್ನು ಮೋಸ ಮಾಡುತ್ತಿದ್ದ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಾಗ್ದಾಳಿ ನಡೆಸಿದರು.
ಅರ್ಬನ್ ಬ್ಯಾಂಕಿನ ಎ.ಕೆ.ಹಾಪಿಝ್ಕಾ ಹಾಲ್ ನಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಹಮ್ಮಿಕೊಳ್ಳಲಾದ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನು ಓದಿ
- ರೇಬೀಸ್ ಹೋರಿಯಿಂದ ರಂಪಾಟ: ವ್ಯಕ್ತಿಗೆ ತಿವಿತ
- 85 ಸಾವಿರ ನಗದು, ಚಿನ್ನ ಕದ್ದ ಆರೋಪಿ ಬಂಧನ
- ಅರ್ಪಿತಾಗೆ ವಿಟಿಯುನಿಂದ ಡಾಕ್ಟರೇಟ್
ಜನರಿಗೆ ಅನ್ಯಾಯವೆಸಗಿದ ಮೋಸದ ಜನರ ವಿರುದ್ದ ದೇಶವನ್ನು ರಕ್ಷಿಸುವ ನ್ಯಾಯ ಕೊಡಿಸುವವರ ಕಾಂಗ್ರೆಸ್ ಪಕ್ಷದ ಚುನಾವಣೆ ಆಗಿದೆ. ಬೂತ್ ಮಟ್ಟದಲ್ಲಿ ನಮ್ಮ ಸರ್ಕಾರ ತಂದಿರುವ 5 ಗ್ಯಾರಂಟಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರೆ ಸಾಕು ನಾವು ಸುಲಭವಾಗಿ ಗೆಲ್ಲುತ್ತೇವೆ ಎಂಬ ಭರವಸೆ ನಮಗೆ ಇದೆ ಎಂದರು
ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಯಾರಿಗೂ ಉದ್ಯೋಗ ದೊರೆತಿಲ್ಲ.ನಮ್ಮ ಪಕ್ಷದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿದ ಐದು ಗ್ಯಾರಂಟಿಯನ್ನ ಜಾರಿ ಮಾಡಿದ್ದೇವೆ.ಜನ ನೆಮ್ಮದಿಯಲ್ಲಿದ್ದಾರೆ.ಉತ್ತರಕನ್ನಡ ಜಿಲ್ಲೆಯಲ್ಲಿ ಯಾವೇಲ್ಲಾ ಸಮಸ್ಯೆಗಳು ಇದೆ ಎನ್ನುವುದು ಗೊತ್ತಿದೆ. ಮೀನುಗಾರರ ಸಮಸ್ಯೆ ಸೇರಿದಂತೆ ನಿರುದ್ಯೋಗ,ಅರಣ್ಯ ಅತಿಕ್ರಮಣದಾರರ ಸಮಸ್ಯೆ ಸೇರಿದಂತೆ ಎಲ್ಲಾ ಸಮಸ್ಯೆಗೂ ಪರಿಹಾರ ನೀಡಲಾಗುವುದು.ನಮ್ಮ ಸರಕಾರ ನುಡಿದಂತೆ ನಡೆಯುವ ಸರಕಾರವಾಗಿದೆ. ಎಂದರು.