suddibindu.in
ಕಾರವಾರ : ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್(Shivaram Hebbar)ಅವರು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆ ಆಗುವುದು ಬಹುತೇಕ ಖಚಿತವಾಗಿದೆ.
ಇವತ್ತು ನಡೆಯುತ್ತಿರುವ ರಾಜಸಭಾ ಚುನಾವಣೆಯಲ್ಲಿ (Rajya Sabha Elections) ಮತದಾನ ಮಾಡಲು ಶಿವರಾಮ ಹೆಬ್ಬಾರ್ ಈಗಾಗಲೇ ಕಾಂಗ್ರೆಸ್(Congress)ಎಂ ಎಲ್ ಎ ಕುಣಿಗಲ್ ರಂಗನಾಥ ಅವರ ಕಾರನಲ್ಲೆ ಆಗಮಿಸಿದ್ದಾರೆ. ಶಾಸಕ ರಂಗನಾಥ ಅವರು ಡಿ ಕೆ ಶಿವಕುಮಾರ ಅವರ ಸಂಬಂಧಿ ಸಹ ಹೌದು, ಹೀಗಾಗಿ ಈಗಾಗಲೆ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ (Congress Joining)ಆಗುವ ಬಗ್ಗೆ ಫೈನಲ್ ಮಾಡಿಯೇ ಚುನಾವಣೆಯಲ್ಲಿ ಮತದಾನ ಮಾಡಲು ಆಗಮಿಸಿದ್ದಾರೆ.
ಇದನ್ನು ಓದಿ:-
- ಗೋವಾಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕ್ಷೀಣ
- ಕಾರವಾರದಲ್ಲಿ ಸಾಯಿ ಮಂದಿರದಲ್ಲಿ ಕಳ್ಳತನವಾಗಿದ್ದಬೆಳ್ಳಿ ಆಭರಣ ಗೋವಾದಲ್ಲಿ ಪತ್ತೆ
- Today gold and silver rate ಚಿನ್ನದ ಬೆಲೆ ಏಕ್ಧಮ್ ಏರಿಕೆ : 95 ಸಾವಿರ ಗಡಿ ದಾಟಿದ ಹಳದಿ ಲೋಹ
ಈಗಾಗಲೇ ಹೆಬ್ವಾರ್ ಅವರ ಆಪ್ತರಾಗಿರುವ ಯಶವಂತ ಪುರದ ಹಾಲಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (MLA ST Somashekhar) ಅವರ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅಡ್ಡ ಮತದಾನ ಮಾಡಿದ್ದಾರೆ. ಈ ಇಬ್ಬರೂ ಶಾಸಕರು ಇಂದು ಸಂಜೆ ತಮ್ಮ ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಇಂದು ಅಥವಾ ನಾಳೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತು ಕಾಂಗ್ರೆಸ್ ವಲಯದಿಂದ ಕೇಳಿ ಬರುತ್ತಿದೆ.
ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗದ ಹೆಬ್ಬಾರ್
ಶಿವಮರಾಮ ಹೆಬ್ಬಾರ್ ಅವರನ್ನ ಸಂಪರ್ಕ ಮಾಡಲು ಬಿಜೆಪಿ ನಾಯಕರು ಬೆಳಿಗ್ಗೆಯಿಂದಲ್ಲೆ ಸಾಕಷ್ಟು ಪೋನ್ ಕರೆಗಳನ್ನ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಯಾರ ಕರೆಗಳನ್ನ ಸಹ ಹೆಬ್ಬಾರ್ ಸ್ವೀಕರಿಸುತ್ತಿಲ್ಲ ಎನ್ನಲಾಗಿದ್ದು,ಇದೀಗ ಕೆಲ ಗಂಟೆಯಿಂದ ಅವರು ತಮ್ಮ ಮೊಬೈಲ್ ಸ್ವೀಚ್ ಆಪ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.