suddibindu.in
Karwar : ಕಾರವಾರ : ಕಾರವಾರ ಶಾಸಕ ಸತೀಶ ಸೈಲ್ ಅವರ ಕನಸಿನ ಯೋಜನೆಯಲ್ಲಿ ಒಂದಾಗಿರುವ ಅಂತರಾಷ್ಟ್ರೀಯ ಕ್ರಿಕೆಟ್( International Cricket) ಕ್ರೀಡಾಂಗಣ ನಿರ್ಮಣಕ್ಕಾಗಿ ಫೆ 29ರಂದು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (Cricket Association) ಇವರಿಗೆ ಜಿಲ್ಲಾಡಳಿತದಿಂದ ಚಿತ್ತಾಕುಲದಲ್ಲಿರು ಹನ್ನೊಂದು ಎಕರೆ ಜಮೀನು ಹಸ್ತಾಂತರ ಮಾಡಲಾಗುವುದು
.

ಉತ್ತರ ಕನ್ನಡ ಜಿಲ್ಲಾಡಳಿತವು ಚಿತ್ತಾಕುಲದಲ್ಲಿರುವ ಸರ್ವೆ ಸಂಖ್ಯೆ 1144ಅ ಇಲ್ಲಿಯ11.34ಎಕರೆ ಜಾಗವನ್ನು, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಇದರ ಅಧ್ಯಕ್ಷರಿಗೆ 29 ರಂದು ಹಸ್ತಾಂತರ ಮಾಡಲಾಗುವುದು ಎಂದು ಕಾರವಾರ ಅಂಕೋಲಾ ಶಾಸಕ ಸತೀಶ ಕೆ ಸೈಲ್ ತಿಳಿಸಿದ್ದಾರೆ.( MLA Satish Sail) ಕ್ರೀಡಾಂಗಣಕ್ಕಾಗಿ 2018ರಂದು ಅಂದಿನ ಸರಕಾರ ಚಿತ್ತಾಕುಲ ಗ್ರಾಮದ ಸರ್ವೆ ಸಂಖ್ಯೆ 1144 ಅ 11.34 ಎಕರೆ ಗೋಮಾಳ ಜಮೀನನ್ನು ಗೋಮಾಳ ಶೀರ್ಷಿಕೆಯಿಂದ ಕಡಿಮೆ ಮಾಡಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಇವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ವಾರ್ಷಿಕ ಬಾಡಿಗೆ ಆಧಾರದಲ್ಲಿ ನೀಡಲು ಆದೇಶ ಮಾಡಲಾಗಿತ್ತು.

ಇದನ್ನೂ ಓದಿ:

ನಂತರ ಜಿಲ್ಲಾಡಳಿತ ಮತ್ತು ಕೆ ಎಸ್ ಸಿ ಎ  ಮಧ್ಯೆ ಬೇಕಾಗಿರುವ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪರಸ್ಪರ ಸಭೆ ನಡೆಸಿ ಪೂರ್ಣಗೊಳಿಸಲಾಗಿತ್ತು. 2013 ರಿಂದ 2018 ರ ಅವದಿಯಲ್ಲಿ ಶಾಸಕರಾಗಿದ್ದ ಇಂದಿನ ಶಾಸಕ ಸತೀಶ್ ಸೈಲ್ ಅವರು ಸರಕಾರದ ಮೇಲೆ ಒತ್ತಡ ತಂದು ಗಡಿ ಪ್ರದೇಶದಲ್ಲಿ ಸಮುದ್ರ ಮತ್ತು ಕಾಳಿ ನದಿಯ ಸಂಗಮ ಪ್ರದೇಶದ ಗುಡ್ಡದ ರಮಣೀಯ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಿ ಈ ಪ್ರದೇಶವನ್ನು ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸಲು ನಿರ್ಧರಿಸಿದ್ದರು.

ನಂತರದಲ್ಲಿ ಸರಕಾರ ಬದಲಾದ ಕಾರಣ ಈ ಪ್ರಕ್ರಿಯೆ ‌ಮುಂದುವರೆದಿರಲಿಲ್ಲ.ಇದೀಗ ಸೈಲ್ ಮತ್ತೆ ಶಾಸಕರಾಗಿದ್ದು, ಹಿಂದೆ ನೀಡಿದ್ದ ಭರವಸೆಯನ್ನ ಕಾರ್ಯರೂಪಕ್ಕೆ ತರಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿರುವುದರಿಂದ ಇದೀಗ ಆ ಜಮೀನಿನಲ್ಲಿ ಕ್ರೀಡಾಂಗಣ‌ ನಿರ್ಮಾಣಕ್ಕಾಗಿ ಸ್ಥಳ ಹಸ್ತಾಂತರ ಮಾಡಲಾಗುತ್ರಿದೆ. ಪೆಬ್ರವರಿ 29ರಂದು ಬೆಳಿಗ್ಗೆ ಹನ್ನೊಂದು ಘಂಟೆಗೆ ಜಿಲ್ಲಾಡಳಿತದಿಂದ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಬೆಂಗಳೂರು ಇವರಿಗೆ ಜಮೀನನ್ನು ಹಸ್ತಾಂತರಿಸುವ ಕಾರ್ಯಕ್ರಮ ಹಮ್ಮಿ ಕೊಂಡಿದೆ.

ಈ ವೇಳೆ ಶಾಸಕ ಸತೀಶ ಸೈಲ್,ಕೆ ಎಸ್ ಸಿ ಏ ಪರವಾಗಿ ಇದರ ಅಧ್ಯಕ್ಷ ಮಾಜಿ ಟೆಸ್ಟ್ ಆಟಗಾರ ರಘುರಾಮ ( Former Test Player Raghurama,)ಭಟ್,ಎಂ ಎಸ್ ವಿನಯ್,ನಿಖಿಲ್ ಭೂಷಡ್ ಮ್ಯಾನೇಜಿಂಗ್ ಕಮಿಟಿ ಸದಸ್ಯರು ಹಾಜರಿದ್ದು  ಕೆ ಎಸ್ ಸಿ ಎ ಪರವಾಗಿ ಜಿಲ್ಲಾಡಳಿತದಿಂದ ಜಮೀನು ಸ್ವೀಕರಿಸಲಿದ್ದಾರೆ.