suddibindu.in
Gokarna ಗೋಕರ್ಣ : ಗಾಂಜಾ ಮತ್ತಿಲ್ಲಿನಲ್ಲಿ ತೆಲಾಡುತ್ತಿದ್ದ ಜಾರ್ಖಡ್‌ (Jharkhand)/ಮೂಲದ ಇಬ್ಬರೂ ಪ್ರವಾಸಿ ಮಹಿಳೆಯರು ಪಾದಚಾರಿಗೆ ಸ್ಕೂಟಿ ಡಿಕ್ಕಿ ಹೊಡೆದು ಬಳಿಕ ಇಬ್ಬರೂ ಮಹಿಳಾ ಪೊಲೀಸರ(Women Police,)ಮೇಲೆನೇ ಹಲ್ಲೆ ಮಾಡಿರುವ ಘಟನೆ ಉತ್ತರಕನ್ನಡ (uttarkannada) ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ.

ಇದನ್ನೂ ಓದಿ : ಮಣಕಿ ಮೈದಾನದಲ್ಲಿ ಪರ್ವತದಿಂದ ಸಂಜೀವಿ ಇಳಿಸಿದ ಆಂಜನೇಯ

ಗೋಕರ್ಣದ ಮಹಾಭಲೇಶ್ವರ ದೇವಸ್ಥಾನದ ರಸ್ತೆಯಲ್ಲಿ ಇಬ್ಬರೂ ಮಹಿಳಾ ಪ್ರವಾಸಿಗರು ಗಾಂಜಾ ಸೇವನೆ ಮಾಡಿ ಸ್ಕೂಟಿ ಚಲಿಸಿಕೊಂಡು ಹೋಗುತ್ತಿರುವ ವೇಳೆ ಬೀಚ್‌ ( Gokarna Beach,)ಕಡೆ ಹೋಗುತ್ತಿದ್ದ ಪಾದಚಾರಿಗೆ ಪ್ರವಾಸಿ ಮಹಿಳೆಯರು ಅಪಘಾತ ಪಡಿಸಿದ್ದಾರೆ, ಈ ವೇಳೆ ಇಬ್ಬರೂ ಮಹಿಳಾ ಪೊಲೀಸರು ಪ್ರವಾಸಿಗ ಮಹಿಳೆಯರನ್ನ ಪ್ರಶ್ನೆ ಮಾಡಿದಕ್ಕೆ ಪೊಲೀಸರು ಎನ್ನುವುದನ್ನ ಮರೆತು ಹಲ್ಲೆ ಮಾಡಿದ್ದಾರೆ.

ಗೋಕರ್ಣ ಪೊಲೀಸ್‌ ಠಾಣೆಯ(Gokarna Police Station) ಮಹಿಳಾ ಸಿಬ್ಬಂದಿಗಳಾದ ವಿನುತ ಹಾಗೂ ಶಿಲ್ಪ ಎಂಬ ಮಹಿಳಾ ಪೊಲೀಸರ ಮೇಲೆನೆ ಹಲ್ಲೆ ಮಾಡಲಾಗಿದೆ,ಈ ಹಲ್ಲೆ ಮಾಡಿರುವ ಇಬ್ಬರೂ ಜಾರ್ಖಂಡ್‌ ಮೂಲದ ಪ್ರವಾಸಿಗರನ್ನ (Jharkhand Tourists) ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆ(Medical Checkup,) ಮಾಡಲಾಗಿದ್ದು, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎನ್ನಲಾಗಿದೆ,