ಮುಂಬೈ: ಮಾಡೆಲಿಂಗ್ ಹಾಗೂ ನಟನೆಯಲ್ಲಿ ಹೆಸರು ಮಾಡಿದ್ದಕ್ಕಿಂತಾ, ಗಾಸಿಪ್ಪುಗಳ ಮೂಲಕ ಹೆಚ್ಚು ಗುಲ್ಲೆಬ್ಬಿಸಿದ್ದ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನನ್ನಪ್ಪಿದ್ದಾರೆ.
ಪೂನಂ ಪಾಂಡೆ ಅವರ ಮ್ಯಾನೇಜರ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಪೂನಂ ಪಾಂಡೆ ಅವರ ಮ್ಯಾನೇಜರ್ ಹಾಗೂ ಅವರ ಟೀಮ್ ಈ ಕುರಿತಾಗಿ ಇನ್ಸ್‌ಟಾಗ್ರಾಮ್‌ನಲ್ಲಿ Instagram ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ.ಅಧಿಕೃತ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಬರೆದುಕೊಂಡಿರುವ ಟೀಮ್, ‘ಇಂದಿನ ಬೆಳಗ್ಗೆ ನಮಗೆಲ್ಲರಿಗೂ ಕಠಿಣ ದಿವಾಗಿತ್ತು.ಗರ್ಭಕಂಠದ ಕ್ಯಾನ್ಸರ್‌ನ ಕಾರಣದಿಂದಾಗಿ ಇಂದು ನಾವು ಪೂನಮ್ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ದುಃಖವಾಗುತ್ತಿದೆ.
ಇದನ್ನೂ ಓದಿ:- ಆ ಒಂದು ರಾಶಿಯವರಿಗೆ ಇಂದು ಉತ್ತಮ ಆಧಾಯ ಬರಲಿದೆ.
ಆಕೆಯೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಂದು ಜೀವಗಳಿಗೂ ಶುದ್ಧ ಪ್ರೀತಿ ಹಾಗೂ ದಯೆಯಿಂದ ಭೇಟಿಯಾಗುತ್ತಿದ್ದರು.ಈ ದುಃಖದ ಸಮಯದಲ್ಲಿ ನಾವು ನಮ್ಮ ಖಾಸಗಿತನಕ್ಕಾಗಿ ವಿನಂತಿ ಮಾಡುತ್ತಿದ್ದೇವೆ. ಆಕೆಯೊಂದಿಗೆ ಹಂಚಿಕೊಂಡ ಎಲ್ಲಾ ಕ್ಷಣಗಳನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ’ ಎಂದು ಬರೆದುಕೊಂಡಿದೆ.
ನಟಿಯ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ತೀವ್ರ ಆಘಾತಕ್ಕೆ ಒಳಗಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ. ಪೂನಂ ಪಾಂಡೆ 2013 ರ ‘ನಶಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ಕೊನೆಯ ಬಾರಿಗೆ ‘ಲಾಕ್ ಅಪ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು.