ಸುದ್ದಿಬಿಂದು ಬ್ಯೂರೋ
ಕುಮಟ : ಸಾಲು ಸಾಲು ರಜೆಗಳು ಬಂದಿರುವುದರಿಂದ ಉತ್ತರಕನ್ನಡ ಜಿಲ್ಲೆಯ(Tourist spot)ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿಕೊಂಡಿದ್ದು, ಹೆದ್ದಾರಿಗಳಲ್ಲಿ ಟ್ರಾಫಿಕ್ ಜಾಂ ಉಂಟಾಗಿದೆ‌.

ಉತ್ತರಕನ್ನಡ(uttarkannada)ಜಿಲ್ಲೆ ಪ್ರವಾಸಿಗರ ಸ್ವರ್ಗ ಅಂತಾನೇ ಕರೆಯಲಾಗತ್ತದೆ. ಸಾಲು ಸಾಲು ರಜೆಗಳು ಬಂತು ಅಂದರೆ ಸಾಕು ರಾಜ್ಯದ ಹಾಗೂ ದೇಶ-ವಿದೇಶಗಳಿಂದ ಪ್ರವಾಸಿಗರು ಜಿಲ್ಲೆಯತ್ತ ಹರಿದು ಬರುತ್ತಿದ್ದಾರೆ. ಇದೀಗ ಕ್ರಿಸ್ ಮಸ್(Christmas)ಹಾಗೂ ಹೊಸ ವರ್ಷಾಚರಣೆ(new year) ಇರುವ ಹಿನ್ನಲೆಯಲ್ಲಿ ಲಕ್ಷಾಂತರ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ.

ನಿನ್ನೆ ರಾತ್ರಿಯಿಂದಲ್ಲೇ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ರಾಫಿಕ್ ಜಾಂ ಉಂಟಾಗಿದೆ. ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಹೆಗಡೆ ಕ್ರಾಸ್ ತನಕ ನೂರಾರು ವಾಹನಗಳು ಸರದಿ ಸಾಲಿನಲ್ಲಿ ನಿಂತುಕೊಂಡಿದ್ದು, ವಾಹನದಟ್ಟಣೆಯಿಂದಾಗಿ ಹೆದ್ದಾರಿ ಬಂದ್ ಆಗಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೆದ್ದಾರಿಯಲ್ಲಿ ತುಂಬಿಕೊಂಡಿರುವ ವಾಹನಗಳನ್ನ ಮುಂದೆ ಸಾಗಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಜಿಲ್ಲೆಯ ಮುರುಡೇಶ್ವರ, ಗೋಕರ್ಣಕ್ಕೆ ಬರುವ ಪ್ರವಾಸಿಗರಿಗಂತೂ ಲೆಕ್ಕವಿಲ್ಲಂತಾಗಿದೆ. ಹೆದ್ದಾರಿ ಎರಡು ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತುಕೊಂಡಿದ್ದು,ಉಳಿದ ವಾಹನ ಸಂಚಾರಕ್ಕೆ ತೊಂದರೆ ಎದುರಾಗುತ್ತಿದೆ‌.

ಭರ್ತಿಯಾದ ಲಾಡ್ಜ್,ಹೋಂ ಸ್ಟೇಗಳು
ಪ್ರವಾಸಿಗರು ತುಂಬಿಕೊಂಡಿರುವುದರಿಂದ ಜಿಲ್ಲೆ ಎಲ್ಲಾ ಹೊಟೇಲ್, ಲಾಡ್ಜ್ ಗಳು ಭರ್ತಿಯಾಗಿದ್ದು, ಉಳಿದುಕೊಳ್ಳಲು ಒಂದೇ ಒಂದು ರೂಂ ಸಿಗದಂತಾಗಿದೆ. ಜಿಲ್ಲೆಯ ಪ್ರವಾಸಕ್ಕೆಂದು ಬರುವವರು ಕಳೆದ ಒಂದೇರಡು ತಿಂಗಳ ಹಿಂದೇಯೆ ರೂಂ ಬುಕ್ಕ್ ಮಾಡಿಕೊಂಡಿದ್ದಾರೆ. ಇವೇಲ್ಲದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲದೆ ಪ್ರವಾಸಕ್ಕೆಂದು ಬಂದವರು ಹಾಗೂ ಬರಬೇಕೆನ್ನುತ್ತಿರುವವರಿಗೆ ಜಿಲ್ಲೆಯ ಯಾವ ಸ್ಥಳದಲ್ಲಿಯೂ ಉಳಿದುಕೊಳ್ಳಲು ರೂಂ ಸಿಗದೆ ಪರದಾಡುವಂತಾಗಿದೆ.. ಜಿಲ್ಲೆಗೆ ಆಗಮಿಸಬೇಕಾದ ಅದೆಷ್ಟೋ ಪ್ರವಾಸಿಗರು ಅಕ್ಕ-ಪಕ್ಕದ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಿಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ.

ಇನ್ನೂ ಹಿಂದೆ ಲಾಡ್ಡ್, ಹೋಂ ಸ್ಟೇಗಳಲ್ಲಿ ಒಂದರಿಂದ ಎರಡು ಸಾವಿರ ರೂಪಾಯಿಗೆ ಬಾಡಿಗೆ ಸಿಗುತ್ತಿದ್ದ ರೂಂ ಗಳು ಈಗ ಐದು ಸಾವಿರದಿಂದ ಹತ್ತು ಸಾವಿರ ಕೊಟ್ಟರು ಸಹ ಸಿಗದಂತಾಗಿದೆ. ಎಲ್ಲಾ ಲಾಡ್ಜ್ ಹಾಗೂ ಹೋಂ ಸ್ಟೇ ಗಳು ಕೂಡ ಭರ್ತಿಯಾಗಿದೆ‌. ಈ ತಿಂಗ ಕೊನೆಯವರೆಗೂ ಜಿಲ್ಲೆಯಲ್ಲಿ ಇದೆ ಪರಿಸ್ಥಿತಿ ಮುಂದುವರೆಯಲಿದ್ದು, ಜಿಲ್ಲೆಯ ಪ್ರವಾಸಕ್ಕೆ ಬರುವವರು ಹತ್ತುಬಾರಿ ಯೋಚನೆ ಮಾಡಿಯೇ ಜಿಲ್ಲೆಗೆ ಕಾಲಿಡಬೇಕಾಗಿದೆ.