ಸುದ್ದಿಬಿಂದು ಬ್ಯೂರೋ
ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಪ್ರೇಮಾ ಮತ್ತು ನಾಗೇಂದ್ರ ನಾಯ್ಕ ಪುತ್ರಿ ಅನ್ವಿತಾ ಇವರು ಬಾಗಲಕೋಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬೆಳಗಾವಿ ವಿಭಾಗದ ಮಟ್ಟದ ದಸರಾ ಕ್ರೀಡಾಕೂಟದ ವಶು ಲೀಗ್ ಸಬ್ ಜೂನಿಯರ್ ಶಾನ್ಸು(ಪೈಟ್) ಕ್ರೀಡೆಯ 42 ಕೆ.ಜಿ. ಒಳಗಿನ ವಿಭಾಗದಲ್ಲಿ ಚಿನ್ನದ ಪದಕ(Gold Medal,)ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಇನ್ನೂ ಅ.11 ರಿಂದ 15ರ ವರೆಗೆ ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ದಸರಾ(Mysore Dasara) ಕ್ರೀಡಾಕೂಟದಲ್ಲಿ ಅನ್ವಿತಾ ನಾಯ್ಕ ಪ್ರತಿನಿಧಿಸಲಿದ್ದಾಳೆ. ವಶು ಅಶೋಸಿಯೇಶನ್ ಜನರಲ್ ಸೆಕ್ರಟರಿ ರಾಘವೆಂದ್ರ ಹೊನ್ನಾವರ ಇವರ ರಾಯಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ಪಟ್ಟಣದ ಮಾರ್ಥೋಮಾ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಅನ್ವಿತಾ ನಾಯ್ಮ ಸಾಧನೆಗೆ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ತರಬೇತಿದಾರ ರಾಘವೇಂದ್ರ ಹೊನ್ನಾವರ, ಮಾರ್ಥೊಮಾ ಸಂಸ್ಥೆಯವರು ಅಭಿನಂದಿಸಿ ಶುಭಹಾರೈಸಿದ್ದಾರೆ.