ಸುದ್ದಿಬಿಂದು ಬ್ಯೂರೋ
ಕಾರವಾರ :ನಗರದ ಚಾಪೆಲ್ ಯುದ್ಧ (Warship Chappell)ನೌಕೆಯ ಮ್ಯೂಸಿಯಂ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಐ.ಎನ್.ಎಸ್. ಟಪ್ಲೋವ್ ಯುದ್ಧ ವಿಮಾನದ (Tuplov warplane) ಮ್ಯೂಸಿಯಂಗಾಗಿ ಚೆನೈನಿಂದ ಹೊರಟ ವಿಮಾನದ ಬಿಡಿಭಾಗಗಳು ಕಾರವಾರವನ್ನು ತಲುಪಿದೆ.

ಒಂಬತ್ತು ಬೃಹತ್ ಲಾರಿಗಳಲ್ಲಿ ವಿಮಾನದ ಬಿಡಿ ಭಾಗಗಳನ್ನು ತರಲಾಗಿದ್ದು, ವಿಮಾನದ ರೆಕ್ಕೆ, ಮುಂಭಾಗ, ಹಿಂಭಾಗ, ವಿಮಾನ ನಿಲ್ಲಲು ಬಸಳುವ ಸ್ಟಾಂಡ್ ಹಾಗೂ ಇತರೆ ಭಾಗಗಳು ಸೇರಿವೆ.ಕಳೆದ ಎರೆಡು ವರ್ಷಗಳಿಂದ ಯುದ್ಧ ವಿಮಾನದ ಮ್ಯೂಸಿಯಂ ಸ್ಥಾಪನೆ ಮಾಡುವ ಮಾತುಗಳು ಕೇಳಿ ಬರುತ್ತಲ್ಲೆ‌‌ ಇತ್ತು. ಆದರೆ ಕಾರಣಾಂತರದಿಂದ ಮುಂದೂಡಲಾಗುತ್ತಿತ್ತು.

ಈ ವಿಮಾನ ದೊಡ್ಡದಾಗಿರುವ ಕಾರಣ ಚೆನೈನ ವಿಶಾಖಪಟ್ಟಣದಿಂದ ತರಲು ಅಸಾಧ್ಯವಾಗಿತ್ತು. ಹೀಗಾಗಿ ವಿಮಾನವನ್ನ ಬಿಡಿ ಭಾಗಗಳಾಗಿ ವಿಂಗಡಿಸಿ ಲಾರಿಗಳ ಮೂಲಕ ತರಲಾಗಿದೆ. ಬಿಡಿ ಭಾಗಗಳನ್ನು ಹೊತ್ತ ಲಾರಿಗಳು ಕಾರವಾರ ನಗರದ ರಾಷ್ಟ್ರೀಯ ‌ಹೆದ್ದಾರಿಯ ಮೇಲ್ಸೇತುವೆಯ ಕೆಳಭಾಗದಲ್ಲಿ ನಿಲುಗಡೆ ಮಾಡಲಾಗಿದೆ.

ವಿಮಾನದ ವಿಶೇಷತೆಗಳೇನು.
ಐ.ಎನ್.ಎಸ್ ಟಪ್ಲೋವ್ ಯುದ್ಧ ವಿಮಾನವು 29 ವರ್ಷಗಳ ಕಾಲ ಭಾರತ ನೌಕಾಪಡೆಯಲ್ಲಿ(Naval base) ಸೇವೆ ಸಲ್ಲಿಸಿದೆ. ಜತೆಗೆ 30 ಸಾವಿರ ಗಂಟೆಗಳ ಅಪಘಾತ ರಹಿತ ಹಾರಾಟವನ್ನು ಕೂಡಾ ನಡೆಸಿದೆ.

ರಷ್ಯಾ ನಿರ್ಮಿತ ಟಪ್ಲೋವ್ -142 ಯುದ್ಧ ವಿಮಾನಗಳನ್ನು ಈಗ ಭಾರತೀಯ ನೌಕಾದಳ ಡಿ-ಕಮಿಷನ್ (ನಿವೃತ್ತಿ)ಮಾಡಿದೆ.ಸದ್ಯ ವಿಶಾಖಾಪಟ್ಟಣಂನಲ್ಲಿ ಟಪ್ಲೋವ್ ಯುದ್ಧ ವಿಮಾನದ ಮ್ಯೂಸಿಯಂ ಅನ್ನು 14 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.ವಿಮಾನವನ್ನು ಚೆನೈನಿಂದ ಕಾರವಾರಕ್ಕೆ ಸಾಗಿಸಲು ನಾಲ್ಕು ಕೋಟಿ ರೂ. ವೆಚ್ಚವಾಗಿದೆ ಎನ್ನಲಾಗಿದೆ.