ಸುದ್ದಿಬಿಂದು ಬ್ಯೂರೋ
ಕುಮಟ : ಅತಿ ವೇಗವಾಗಿ ಚಲಾಯಿಸಿಕೊಂಡ ಬಂದ ಲಾರಿ (ಈಚರ) ಚಾಲಕ ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಈಚರ ವಾಹನ ಪಲ್ಟಿಯಾಗಿ ಬೈಕ್ ಸವಾರ ಸೇರಿ ಮೂವರು ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟ ಪಟ್ಟಣದ ಮಾನೀರ ಹೆದ್ದಾರಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಹರಕಡೆ ಮೂಲದ ಬೈಕ್ ಸವಾರ ಶಿವು ಗೌಡ ಎಂಬುವವರಿಗೆ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಈಚರ ವಾಹನ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿದೆ.ಇದರಿಂದಾಗಿ ಲಾರಿ ಚಾಲಕ ಹಾಗೂ ಕ್ಲಿನರ್ ಗಾಯಗೊಂಡಿದ್ದಾರೆ.

ಈಚರ ವಾಹನ ಪಲ್ಟಿಯಾಗಿರುವುದುರಿಂದ ಅದರ ಚಾಲಕ ಹಾಗೂ ಕ್ಲಿನರ್ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಈಚರ ವಾಹನದಲ್ಲಿದ್ದ ಚಂದು,ಗಣೇಶ ಎಂಬುವವರಿಗೆ ಗಾಯವಾಗಿದೆ. ಕ್ಲಿನರ್ ಗಂಭೀರವಾಗಿ ಗಾಯಗೊಂಡಿದ್ದು ಕುಮಟ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಈಚರ ವಾಹನ ಚಾಲಕ ಅತಿವೇಗವಾಗಿ ವಾಹನ ಚಲಾಯಿಸಿಕೊಂಡು ಬಂದಿರುವುದೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.