ಸುದ್ದಿಬಿಂದು ಬ್ಯೂರೋ
ಕಾರವಾರ : ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಭಾಗ್ಯದಲ್ಲಿ ಒಂದಾಗಿರುವ “ಗೃಹಲಕ್ಷ್ಮಿ” ಯೋಜನೆ ಜಾರಿಯಾಗಿದ್ದರು, ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಅದೆಷ್ಟೋ ಮಹಿಳೆಯರ ಬ್ಯಾಂಕ್ ಖಾತೆಗೆ ಇನ್ನೂ ಧನಲಕ್ಷ್ಮಿ ಜಮಾ ಆಗದೆ ಮಹಿಳೆಯರು ಬ್ಯಾಂಕ್ ಗಳಿಗೆ ಅಲೆದಾಡುವಂತಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಲಿಂಕ್ ಹೊಂದಿರುವ ಮೊಬೈಲ್ ಸಂಖ್ಯೆಗೆ ಈಗಾಗಲೆ ಗೃಹಲಕ್ಷ್ಮಿ ಯೋಜನೆಯ 2000 ಸಾವಿರ ಹಣ ಜಮಾವಣೆ ಆಗಿದೆ ಎಂದು ಸಂದೇಶ ಕೂಡ ಬಂದಿದೆ. ಆದರೆ ಬ್ಯಾಂಕ್ ಗಳಿಗೆ ಹೋಗಿ ಪರಿಶೀಲನೆ ನಡೆಸಿದರೆ ಹಣ ಮಾತ್ರ ಇನ್ನೂ ಜಮಾ ಆಗಿರುವುದು ಕಾಣುತ್ತಿಲ್ಲ. ಹೀಗಾಗಿ ಒಂದು ಕಡೆ ಗೃಹಲಕ್ಷ್ಮಿಯರು ಬ್ಯಾಂಕ್ ಗಳಿಗೆ ಅಲೆದಾಡುತ್ತಿದ್ದರೆ. ಬ್ಯಾಂಕ್ ಗಳಿಗೆ ಬಂದ ಮಹಿಳೆಯರ ಖಾತೆ ಪರಿಶೀಲನೆ ನಡೆಸುವುದೆ ಅಲ್ಲಿನ ಸಿಬ್ಬಂದಿಗಳಿಗೆ ದೊಡ್ಡ ಕೆಲಸವಾಗಿದೆ. ಇದರಿಂದಾಗಿ ಇನ್ನೂಳಿದ ಬ್ಯಾಂಕ್ ಕೆಲಸಗಳು ಹಾಗೆ ಇರುವಂತಾದೆ.

ಹಣ ಬಾರದೆ‌ ಇದ್ದರೆ ಏನ ಮಾಡಬೇಕು.?

ಈಗಾಗಲೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಜಮಾ ಆಗಿರುವ ಬಗ್ಗೆ ಯಾರಿಗೆಲ್ಲಾ ಮೆಸೇಜ್ ಬಂದು ಹಣ ಜಮಾ ಆಗದೆ ಇರುವವರು ಮೊದಲು ಗ್ರಾಮ ಒನ್ ಅಥವಾ ಇತರೆ ಕಡೆಯಲ್ಲಿ ಭರ್ತಿ ಮಾಡಿದ ಎಲ್ಲಾ ದಾಖಲೆಗಳನ್ನ ಸ್ಥಳೀಯ ಅಂಗನವಾಡಿ ಕೇಂದ್ರಗಳಿಗೆ ಹೋಗಿ ಅಲ್ಲಿರುವ ರಿಜಿಸ್ಟರ್ ಬುಕ್ ನಲ್ಲಿ ದಾಖಲಿಸಿಕೊಂಡರೆ ಒಂದೆ ದಿನದಲ್ಲಿ ಅವರ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ 2000ರೂಪಾಯಿ ಜಮಾ ಆಗುತ್ತಿದೆ. ಈ ರೀತಿ ಮೆಸೇಜ್ ಬಂದು ಹಣ ಬಾರದೆ ಇರುವ ಅನೇಕ ಮಹಿಳೆಯರು ಈಗಾಗಲೆ ತಮ್ಮ ಸ್ಥಳೀಯ ಅಂಗನವಾಡಿಗೆ ಹೋಗಿ ಅಲ್ಲಿರುವ ಎಲ್ಲಾ ದಾಖಲಾತಿಯನ್ನ ನೀಡುವ ಮೂಲಕ ತಮ್ಮ ತಮ್ಮ ಖಾತೆಗೆ ಹಣ ಜಮಾ ಆಗುವಂತೆ ಮಾಡಿಕೊಂಡಿದ್ದಾರೆ.ಈ ಬಗ್ಗೆ ಅನೇಕ ಕಡೆಯಲ್ಲಿ ಸರಿಯಾದ ಮಾಹಿತಿ ಇಲ್ಲದೆ ಮಹಿಳೆಯರು ಪರದಾಡುವಂತಾಗಿದೆ..