ಉಡುಪಿ/ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ 7ಕೋಟಿ ವಂಚನೆ ಆರೋಪದಲ್ಲಿ ಬಂಧಿತಳಾಗಿರುವ ಬಾಡಿಗೆ ಭಾಷಣಕಾರ್ತಿ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ರಂಪಾಟಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ.
ಬಾಬು ಗೋವಿಂದ ಪೂಜಾರಿ ಎನ್ನುವ ಉದ್ಯಮಿಯೊಬ್ಬರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಎಮ್ಮಲ್ಲೆ ಟಿಕೆಟ್ ಕೊಡಿಸುವುದಾಗಿ ಹೇಳಿ ಏಳು ಕೋಟಿ ವಂಚಿಸಿದ ಪ್ರಕರಣದಲ್ಲಿ ಪೊಲೀಸರು ಚೈತ್ರಾ ಕುಂದಾಪುರ ಹಾಗೂ ಆಕೆಯ ಸಹಚರರನ್ನು ವಶಕ್ಕೆ ಪಡೆದಿರುತ್ತಾರೆ.
ಹೀಗೆ ಬಂಧಿಸಿದ ಆಕೆಯನ್ನು ಬೆಂಗಳೂರಿಗೆ ಕರೆದೊಯ್ಯುವಾಗ ಮೇಲಿನ ಘಟನೆ ನಡೆದಿದೆಯೆಂದು ತಿಳಿದುಬಂದಿದೆ. ಪೊಲೀಸರು ಆಕೆಯ ಪ್ರಯತ್ನವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೆ ಆಕೆ ತನ್ನನ್ನು ಒಯ್ಯುತ್ತಿದ್ದ ಕಾರಿನ ಗಾಜನ್ನೂ ಒಡೆಯಲು ಪ್ರಯತ್ನಿಸಿದ್ದಾಗಿ ಸುದ್ದಿ ಬರುತ್ತಿದೆ. ಪ್ರಸ್ತುತ ಆಕೆಯನ್ನು ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದು, ಸಂಜೆ ನ್ಯಾಯಾಧೀಶರ ಮುಂದೆ ಹಾಜರಿಪಡಿಸುವ ಸಾಧ್ಯತೆಯಿದೆ.
ಪೊಲೀಸರು ಆಕೆಯನ್ನು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದು, ದಾರಿಯುದ್ದಕ್ಕೂ ರಂಪಾಟ ನಡೆಸಿರುವುದು ತಿಳಿದು ಬಂದಿದೆ. ಅದೂ ಸಾಲದೆಂಬಂತೆ ಉಂಗುರ ನುಂಗಿ ಆತ್ಮಹತ್ಯೆಗೂ ಪ್ರಯತ್ನಿಸಿದ ಕುರಿತು ವರದಿಯಾಗಿದೆ.
ಮುಸ್ಲಿಂ ಮಹಿಳೆಯ ಮನೆಯಲ್ಲಿ ಅವಿತು ಕುಳಿತಿದ್ದ ಹಿಂದೂ ಹುಲಿ
ಕಳೆದ ಕೆಲ ವರ್ಷದಿಂದ ತಾನೋಬ್ಬಳು ಕಟ್ಟಾ ಹಿಂದೂವಾದಿ, ಎಂದು ಬಾಡಿಗೆ ಪಡೆದು ಉದ್ದುದ್ದವಾಗಿ ಭಾಷಣ ಬಿಗಿಯುತ್ತಿದ್ದ ಕುಂದಾಪುರ ಚೈತ್ರಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ 7ಕೋಟಿ ಹಣ ಪಡೆದ ಆರೋಪ ಎದುರಿಸುತ್ತಿದ್ದ ಚೈತ್ರಾ ಕುಂದಾಪುರ ಎಂಬಾಕೆಯನ್ನ ಸಿಸಿಬಿ ಪೊಲೀಸರು ಬಂಧಿಸಲು ಬಂದಿದ್ದು , ಈ ವೇಳೆ ಬಂಧನದಿಂದ ತಪ್ಪಿಸಿಕೊಳ್ಳಲು ಈ ಬಾಡಿಗೆ ಭಾಷಣಕಾರ್ತಿ ಇಷ್ಟು ದಿನ ಯಾವ ಸಮುದಾಯವನ್ನ ಟಾರ್ಗೆಟ್ ಮಾಡಿ ಬಾಡಿಗೆ ಹಣದಲ್ಲಿ ಭಾಷಣ ಮಾಡತ್ತಾ ಇದ್ದಲ್ಲೋ, ಪೊಲೀಸರು ಆಕೆಯನ್ನ ಬಂಧಿಸಲು ಬಂದಾಗ ಅದೆ ಸಮುದಾಯದ ಮಹಿಳೆ ಓರ್ವಳ ಮನೆಯಲ್ಲಿ ಅವಿತು ಕುಳಿತಿದ್ದಲ್ಲು ಎನ್ನಲಾಗುತ್ತಿದ್ದು, ಈ ಬಾಡಿಗೆ ಭಾಷಣಕಾರ್ತಿಯ ನಕಲಿ ಹಿಂದೂತ್ವ ಇದೀಗ ಬಯಲಾಗಿದೆ.