ಬೆಂಗಳೂರು : “ಸರ್ಕಾರದ ಕೆಲಸ ದೇವರ ಕೆಲಸ” ಅಂದಂತೆ ರಾಜ್ಯ ಸರ್ಕಾರ ಇದೀಗ ದೇವರ ಕೆಲಸದಲ್ಲಿ ತೊಡಗಿದೆ. ದೇವಸ್ಥಾನಗಳ ಅಂಗಳದಲ್ಲಿ ಪ್ರಶಾಂತತೆ ಕಾಪಾಡಲು, ಸುತ್ತಲಿನ ಪರಿಸರ ಶುದ್ಧವಾಗಿಡಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಧಾರ್ಮಿಕ ಕೇಂದ್ರಗಳ ನೂರು ಮೀಟರ ಅಂತರದಲ್ಲಿ ಗುಟ್ಕಾ ಮತ್ತು ಸಿಗರೇಟ್ ಸೇವನೆ ಮಾಡದಂತೆ ನಿಷೇಧ ಹೇರಿದೆ. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಈಗಾಗಲೇ ಸುತ್ತೋಲೆ ಹೊರಡಿಸಿದೆ.