ಸುದ್ದಿಬಿಂದು ಬ್ಯೂರೋ
ಸಿದ್ದಾಪುರ : ರಸ್ತೆಯಲ್ಲಿ ಹೋಗುತ್ತಿರುವವರನ್ನ ಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದ ಇಬ್ಬರು ದರೋಡೆಕೋರನ್ನ ಸಾರ್ವಜನಿಕರು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕುಂದ ಸಮೀಪದ ಕಂಚಿಕೈ ಬಳಿ ನಡೆದಿದೆ.

ಶಿರಸಿ ತಾಲೂಕಿನ ಬನವಾಸಿ ರಸ್ತೆಯ ಶಹಿದ್ ಮತ್ತು ಶಿವಮೊಗ್ಗ ಟಿಪ್ಪು ನಗರದ ಇರ್ಫಾನ್ ಪೊಲೀಸ್ ವಶದಲ್ಲಿರುವ ದರೋಡೆಕೋರರಾಗಿದ್ದಾರೆ.
ಶಿರಸಿಯಲ್ಲಿ ಇವರಿಬ್ಬರು ಬೈಕ್ ಕಳ್ಳತನ ಮಾಡಿ ಕುಮಟಾ ಶಿರಸಿ ರಸ್ತೆಯ ದೇವಿಮನೆ ಘಾಟ್ ನಲ್ಲಿ ಕೋಳಿ ತುಂಬಿಕೊಂಡು ಬರುತ್ತಿದ್ದ ಬೊಲೆರೋ ವಾಹನ ತಡೆದು ಚಾಕು ತೋರಿಸಿ ಹಣ ವಸೂಲಿ ಮಾಡಿ ಕಂಚಿಕೈ ಬಳಿ ಉಂಚಳ್ಳಿ ಜಲಪಾತ ಭೀಮನ ಗುಡ್ಡ ವೀಕ್ಷಿಸಿ ವಾಪಾಸ್ ಮನೆಗೆ ತೆರಳುತ್ತಿದ್ದ ಸುಬ್ರಮಣ್ಯ ಎನ್ನುವವರು ಮೂತ್ರವಿಸರ್ಜನೆ ಗೆ ಬೈಕ್ ನಿಲ್ಲಿಸಿದ್ದ ವೇಳೆ ಹಣವಸೂಲಿಗೆ ಯತ್ನಿಸಿದ್ದಾರೆ.

ವಿಷಯ ತಿಳಿದ ಸಾರ್ವಜನಿಕರು ದರೋಡೆಕೋರರಿಗೆ ಸರಿಯಾಗಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಘಟನೆ ಗೆ ಸಂಬಂದಿಸಿದಂತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವರದಿ : ಸಿದ್ದಾಪುರ ಪ್ರತಿನಿಧಿ

: