ಸುದ್ದಿಬಿಂದು ಬ್ಯೂರೋ
ಮುಂಡಗೋಡ : ನಾನು ಬಿಜೆಪಿಯಲ್ಲಿ ಶಾಸಕನಾಗಿದ್ದೇನೆ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ಹೇಳಲು ನಾನು ಭವಿಷ್ಯ ಹೇಳುವವನಲ್ಲ ಎಂದು ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ
.

.ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿ ಮುಂಡಗೋಡದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನ ಉದ್ದೇಶಿಸಿ ಮಾತನಾಡಿದ ಶಿವರಾಮ ಹೆಬ್ಬಾರ್ ಅವರು ಸದ್ಯ ನಾನು ಬಿಜೆಪಿ ಶಾಸಕನಾಗಿಯೇ ಇದ್ದೇ‌ನೆ, ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ವೇಳೆ ರಾಜಕೀಯ ಚರ್ಚೆ ನಡೆದಿಲ್ಲ. ಕ್ಷೇತ್ರದ‌ ಅಭಿವೃದ್ಧಿ ಕುರಿತಾಗಿ ಶಾಸಕನಾಗಿ ಚರ್ಚೆ ಮಾಡಿದ್ದೇನೆ‌‌.

ಹೊರಗಡೆ ಇದ್ದವರು ಏನ ಬೇಕಾದ್ರೂ ಮಾತ್ನಾಡತ್ತಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ. ನನ್ನ ವಿವೇಚನೆಗೆ ತಕ್ಕಂತೆ ಅದಕ್ಕೆ ಉತ್ತರ ಕೊಡುತ್ತೇನೆ ಎನ್ನುವ ಮೂಲಕ ಶಾಸಕ ಶಿವರಾಮ ಹೆಬ್ಬಾರ್ ಅವರು ತಮ್ಮ ಮಾತಿನಲ್ಲಿ ಎಲ್ಲಿಯೂ ತಾನೂ ಕಾಂಗ್ರೆಸ್ ‌ಸೇರಲ್ಲ ಎನ್ನುವ ಬಗ್ಗೆ ಮಾತನಾಡಿಲ್ಲ. ನಾನು ಭವಿಷ್ಯ ನುಡಿಯುವವನಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸೇರುವ ಗುಟ್ಟನ್ನ ಎಲ್ಲೋ ಒಂದು ಕಡೆ ಬಚ್ಚಿಟ್ಟುಕೊಂಡ ಹಾಗೆ ಇದೆ.