ಸುದ್ದಿಬಿಂದು ಬ್ಯೂರೋ
ಕುಮಟಾ : ಇತ್ತೀಚಿನ ದಿನಗಳಲ್ಲಿ ಹದಿ ಹರೆಯದ ಮಕ್ಕಳು ದಾರಿ ತಪ್ಪುತ್ತಿದ್ದು,  ಶಿಕ್ಷಣದತ್ತ ಗಮನ ಹರಿಸದೇ ಮೋಜುಮಸ್ತಿಯಲ್ಲಿ  ಕಾಲಕಳೆಯುತ್ತಿರುವುದು  ಮೇಲ್ನೋಟಕ್ಕೆ ಕಂಡು ಬರುತ್ತಿದೆ
.

ಸ್ನೇಹಿತರ ಸಹವಾಸದಿಂದ ಸಭ್ಯ ಮಕ್ಕಳು ದಾರಿ ತಪ್ಪುತ್ತಿರುವುದು ಪಾಲಕರ ನಿದ್ದೆಗೆಡಿಸಿದೆ. ಇದಕ್ಕೆ ಇಂಬು ನೀಡುವಂತೆ ಕಳೆದ ಆಗಸ್ಟ್  25ರಂದು ಕುಮಟಾದ ಪಾಲಿಟೆಕ್ನಿಕ್ ಕಾಲೇಜು ತರಗತಿಯಿಂದ  ಸುಳ್ಳು ಹೇಳಿ ಹೊರಬರುವಂತೆ ಮಾಡಿ   ಬಲವಂತವಾಗಿ ಕಾರಿನೊಳಗೆ ವಿದ್ಯಾರ್ಥಿಯನ್ನು ಕೂರಿಸಿ ಅಪಹರಿಸಿಕೊಂಡು ಹೋಗಿದ್ದಲ್ಲದೆ, ವಿದ್ಯಾರ್ಥಿಯನ್ನು ಅಕ್ರಮವಾಗಿ ಬಂಧನದಲ್ಲಿರಿಸಿ,ದೂರಕ್ಕೆ ಕರೆದೊಯ್ದು, ಥಳಿಸಿ ಗಾಯಗೊಳಿಸುವ ಜೊತೆಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ  ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದ ಹಿಂದೆ ಡ್ರಗ್ಸ್ ಜಾಲದ ವಾಸನೆ ಇದೆ ಎಂದು ಕೆಲ ವಿದ್ಯಾರ್ಥಿಗಳೆ ಆಡಿಕೊಳ್ಳುತ್ತಿದ್ದಾರೆ.  ಪೊಲೀಸರ ಸೂಕ್ತ ತನಿಖೆಯಿಂದಷ್ಟೇ ಅಸಲಿ ಕಾರಣ ತಿಳಿದು ಬರಲಿದೆ. ಕೆಲ ವರ್ಷದ ಹಿಂದೆ ಕುಮಟಾದ ಪ್ರತಿಷ್ಠಿತ ಕಾಲೇಜೊಂದರ ಸುತ್ತಮುತ್ತಲಿನಲ್ಲಿ ಮಾದಕ ವಸ್ತುಗಳ ಜಾಲ ಇರುವ ಕುರಿತು ಜಿಲ್ಲಾ ಎಸ್ ಪಿ ನೇತೃತ್ವದಲ್ಲಿ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕೆಲ ತಿಂಗಳ ಹಿಂದೆ ಕುಮಟಾ ಪಾಲಿಟೆಕ್ನಿಕ್ ಕಾಲೇಜು ಬಳಿ ಬಾಂಬ್ ಮಾದರಿಯ ವಸ್ತುವೊಂದು ಪತ್ತೆಯಾಗಿ ವಿದ್ಯಾರ್ಥಿಗಳ ಸಹಿತ ನಾಗರಿಕರು ಗಾಬರಿಗೊಂಡಿದ್ದರು. ಆಗಲೂ ಡ್ರಗ್ಸ್ ಮಾಫಿಯಾ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದರು.ವಿದ್ಯಾರ್ಥಿ ಮೇಲಿನ ಈ ಹಲ್ಲೆ ಪ್ರಕರಣಕ್ಕೂ ಮತ್ತು ಆ ಬಾಂಬ್ ಪ್ರಕರಣಕ್ಕೂ ಏನಾದರೂ ಲಿಂಕ್ ಇದೆಯಾ ಎನ್ನುವುದು ಕೂಡ ಪೊಲೀಸ್ ತನಿಖೆಯಿಂದಲೇ