ಸುದ್ದಿಬಿಂದು ಬ್ಯೂರೋ
ಕಾರವಾರ/ಗೋವಾ
: ಕರ್ನಾಟಕ-ಗೋವಾ(goa) ಗಡಿಯಲ್ಲಿರುವ ದೂದ್ ಸಾಗರ ಜಲಪಾತದ ಬಳಿ ಬೃಹತ್ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ರೈಲ್ವೆ ಟ್ರಾಕರಂಜೋಲ್ ರೈಲ್ವೆ ಕ್ ಮೇಲೆ ಬಂಡೆ, ಮಣ್ಣು ಕುಸಿತದಿಂದಾಗಿ ರೈಲ್ವೆ ಸಂಚಾರವನ್ನು(Gudda Kusita railway traffic stop,) ಸ್ಥಗಿತಗೊಂಡಿರುವ ಘಟನೆ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕ್ಯಾಸಲರಾಕ್ (Kasalarock)ಸಮೀಪದ ಕರಂಜೋಲ್ ಬಳಿ ಭೂಕುಸಿತ ಉಂಟಾಗಿದೆ. ಭಾರೀ ಮಳೆಯಿಂದ ಕರಂಜೋಲ್ ರೈಲ್ವೆ ಮಾರ್ಗದಲ್ಲಿ ಭೂಕುಸಿತವಾಗಿದ್ದು, ರೈಲ್ವೆ ಸಂಚಾರ ಸ್ಥಗಿತಗೊಂಡಿದೆ. ಹುಬ್ಬಳ್ಳಿ-ಗೋವಾ ರೈಲು ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ರೈಲ್ವೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು,ರೈಲ್ವೆ ಮಾರ್ಗದ ಮೇಲೆ ಬಿದ್ದಿರುವ ಮಣ್ಣು ತೆರವು ಮಾಡುವ ಕಾರ್ಯ ಮಾಡುತ್ತಿದ್ದಾರೆ.

ಆ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ತೆರವು ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುತ್ತಿದೆ . ಗೋವಾ- ಹುಬ್ಬಳ್ಳಿ- ಬೆಳಗಾವಿ(Goa, Hubli, Belagavi,) ಮಾರ್ಗ ಮಧ್ಯೆ ತಾತ್ಕಾಲಿಕ ರೈಲ್ವೆ ಸಂಚಾರ ಸ್ಥಗಿತವಾಗಿದ್ದು, ಆ ಮಾರ್ಗದಲ್ಲಿ ಸಂಚರಿಸು ಎಲ್ಲಾ ರೈಲುಗಳ ಸಂಚಾರ ಬಂದ್ ಮಾಡಲಾಗಿದೆ‌