ಸುದ್ದಿಬಿಂದು ಬ್ಯೂರೋ
ಮಲ್ಪೆ:
ಅರಬ್ಬೀ ಸಮುದ್ರದಲ್ಲಿ (Arabian sea) ಮೀನುಗಾರಿಕೆ ತೆರಳಿದ್ದ ದೋಣಿ ಸಮುದ್ರ ಅಲೆಯ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರನ್ನ ರಕ್ಷಣೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ( Malpe) ಸಮೀಪದಲ್ಲಿ ನಡೆದಿದೆ.


Confirm (Mangalore,) ಮೂಲದ ಜೈಸನ್ ಲೋಬೋ ಮಾಲಕತ್ವದ ಕ್ವೀನ್ (ಮೇರಿ ಹೆಸರಿನ ದೋಣಿ ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆದು ವಾಪಾಸ್ ಮಂಗಳೂರಿಗೆ ಬರಲು ಪ್ರತಿಕೂಲ ಹವಾಮಾನ ಇದ್ದ ಕಾರಣ ದೋಣಿ ಉಡುಪಿ ಮಲ್ಪೆ ಬಂದರಿಗೆ ಬರುವಾಗ ಈ ದುರಂತ ಸಂಭವಿಸಿದೆ.


ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ದೋಣಿಯ ಪಕ್ಕದಲ್ಲಿದ್ದ ಇನ್ನೊಂದು ದೋಣಿಯವರು ನಾಲ್ವರು ಜನ ಮೀನುಗಾರರ ರಕ್ಷಣೆ ಮಾಡಿದ್ದಾರೆ. 5ಲಕ್ಷದ ಮೀನು ಮತ್ತು ದೋಣಿ ಸೇರಿ 15 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು , ಅಪತ್‌ ಭಾಂದವ ಈಶ್ವರ್ ರಕ್ಷಣಾ ಕಾರ್ಯದಲ್ಲಿ ತಮ್ಮ ಸಹಾಯವನ್ನು ಒದಗಿಸಿದ್ದಾರೆ.