ಸುದ್ದಿಬಿಂದು ಬ್ಯೂರೋ
ಕುಮಟ
: ನಡೆದುಕೊಂಡು ಹೋಗುತ್ತಿದ್ದ ಇಬ್ಬರೂ ಕಾಲು ಜಾರಿ ನೀರಿನಲ್ಲಿ ಬಿದ್ದು ಇಬ್ಬರೂ ಮೃತಪಟ್ಟಿರುವ ಘಟನೆ ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಟ್ಕುಳಿಯಲ್ಲಿ ನಡೆದಿದೆ.

ಘಟನೆಯಲ್ಲಿ ಸತೀಶ ಪಾಂಡುರಂಗ ನಾಯ್ಕ(40), ಹಾಗೂ ಉಲ್ಲಾಸ ಗಾವಡಿ (50) ಮೃತ ದುರ್ದೈವಿಗಳಾಗಿದ್ದಾರೆ. ಇವರಿಬ್ಬರೂ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಭಾರೀ ಮಳೆಯಿಂದಾಗಿ ಗದ್ದೆ ಜಲಾವೃತವಾಗಿದ್ದು, ಈ ವೇಳೆ ಇಬ್ಬರೂ ಕಾಲು ಜಾರಿ ನೀರಿನಲ್ಲಿ ಬಿದ್ದಾರೆ ಎನ್ನಲಾಗಿದ್ದು, ಈ ವೇಳೆ ನೀರಿನ ರಭಸ ಜೋರಾಗಿರುವ ಕಾರಣ ಇಬ್ಬರೂ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.
ಬಳಿಕ ಕೆಲ ಗಂಟೆಯ ನಂತರದಲ್ಲಿ ಅಲ್ಲೆ ಸಮೀಪ ಇಬ್ಬರ ಶವ ಪತ್ತೆಯಾಗಿದೆ.

ಇವರಿಬ್ಬರೂ ಜೊತೆಯಲ್ಲಿ ಹೋಗುತ್ತಿದ್ದರು ಎನ್ನಲಾಗಿದ್ದು, ಓರ್ವ‌ ಕಾಲು ಜಾರಿ ನೀರಿಗೆ ಬಿದ್ದಿದ್ದು, ಈ ವೇಳೆ ಆತನ ಜೊತೆಗೆ ಇದ್ದ ಇನ್ನೋರ್ವ ರಕ್ಷಣೆಗೆ ಮುಂದಾಗಿದ್ದಾನೆ, ಅಲ್ಲೆ‌ ಹೊಂಡ ಇರುವುದರಿಂದಾಗಿ ಇಬ್ಬರೂ ಮುಳುಗಡೆಯಾಗಿದ್ದಾರೆ ಎನ್ನಲಾಗಿದ್ದಾರೆ.ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಬಹುತೇಕ ಮಂದಿ ಇದೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಆದರೆ ಭಾರೀ ಮಳೆಗೆ ಗದ್ದೆಯಲ್ಲಿ ನೀರು ತುಂಬಿರುವ ಕಾರಣ ಕಾಲು ಜಾರಿ ನೀರಿಗೆ ಬಿದ್ದಿದ್ದು ಮೃತಪಟ್ಟಿದ್ದಾರೆ.

ಇನ್ನೂ ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತಾಗಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌