ಸುದ್ದಿಬಿಂದು ಬ್ಯೂರೋ
ಕಾರವಾರ :
ಸದೃಡ ಸಮಾಜ ನಿರ್ಮಾಣದ ಪಾತ್ರದಲ್ಲಿ ಸಹಕಾರಿ ರಂಗದ ಕಾರ್ಯ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಗೋಪು ಹಾಗೂ ಮಂಜು ಸಹೋದರರು ಆದರ್ಶಪ್ರಾಯ ನಿಂತು ಗಮನ ಸೆಳೆಯುತ್ತಿರುವದು ಹರ್ಷ ತಂದಿದೆ ಎಂದು ಮೀನುಗಾರಿಕೆ ಹಾಗೂ ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.

ಅವರು ಕಾರವಾರದಲ್ಲಿ ನೂತನವಾಗಿ ಗೋಪು ನಾಯಕ. ಅಡ್ಲೂರ ಹಾಗೂ ಮಂಜು ನಾಯಕ. ಅಡ್ಲೂರು ಅವರ ಮಾಲಕತ್ವದಲ್ಲಿ ಪ್ರಾರಂಭಗೊಂಡಿರುವ ಅನ್ನಪೂರ್ಣ ಕ್ರೆಡಿಟ್ ಸೌಹಾರ್ದ ಕೋ – ಆಪರೇಟಿವ್ ಸೊಸೈಟಿಗೆ ಭೇಟಿ ನೀಡಿ ಶುಭ ಹಾರೈಸಿ ಮಾತನಾಡಿ ನನ್ನದು ಕೂಡ ಸಹಕಾರಿ ಇದೆ. ಸಹಕಾರಿ ರಂಗದ ಯಶಸ್ಸಿಗೆ ಕಠಿಣ ಪರಿಶ್ರಮ ಮುಖ್ಯವಾಗಿರುತ್ತದೆ.ಕ್ರೀಯಾಶೀಲತೆಗೆ ಕನ್ನಡಿಯಂತಿರುವ ಈ ಸಹೋದದರು ಈ ಸಹಕಾರಿಯನ್ನು ತಮ್ಮ ಪರಿಶ್ರಮದಿಂದ ಉನ್ನತ ಮಟ್ಟದಲ್ಲಿ ಬೆಳೆಸುವ ಮೂಲಕ ಈ ಸಮಾಜಕ್ಕೆ ಉದಾತ್ತ ಕೊಡುಗೆ ನೀಡುವದು ಶತಸಿದ್ದವಾಗಿದೆ. ಈ ಸಹೋದರರು ಸಹಕಾರಿ ರಂಗದಲ್ಲಿ ಇನ್ನು ಹೆಚ್ಚಿನ‌ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ಅನ್ನಪೂರ್ಣ ಕ್ರೆಡಿಟ್ ಸೌಹಾರ್ದ ಕೋ – ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಗೋಪು ನಾಯಕ ಅಡ್ಲೂರು ಮಾತನಾಡಿ ಬಡವರ ಬಗ್ಗೆ ವಿಶೇಷ ಕಾಳಜಿ ಇರುವ ಮಂಕಾಳು ವೈಧ್ಯ ಅವರ ಮಾರ್ಗದರ್ಶನದಲ್ಲಿ ನಾವು ಮುಂದುವರೆದು ನಮ್ಮ ಸಹಕಾರಿಯನ್ನು ಇನ್ನು ಯಶಸ್ಸಿನ ಹೆಜ್ಜೆಯತ್ತ ಮುನ್ನೆಡೆಸುತ್ತೇವೆ ಎಂದರು.

ಸಹಕಾರಿಯ ಅಧ್ಯಕ್ಷ ಮಂಜುನಾಥ ನಾಯಕ ಮಾತನಾಡಿ ಗ್ರಾಹಕರ ಸಂತೃಪ್ತಿಯ ಸೇವೆ ನಮ್ಮ ಧ್ಯೇಯ ಎಂದು ಭಾವಿಸಿದ್ದೇವೆ.ದೇವತಾ ಸಮಾನರಂತೆ ಬಂದು ನಮ್ಮನ್ಬು ಆರ್ಶಿವಾದಿಸಿದ ಮಂಕಾಳು ವೈದ್ಯ ನಾವು ಕೃತಜ್ಞತೆರಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ನಾಗರಾಜ್ ನಾಯ್ಕ, ಮೀನುಗಾರರ ಫೆಡರೇಶನನ ಅಧ್ಯಕ್ಷ ರಾಜು ತಾಂಡೇಲ, ಪತ್ರಕರ್ತರಾದ ರಾಘು ಕಾಕರಮಠ, ದರ್ಶನ ನಾಯ್ಕ. ಹಟ್ಟಿಕೇರಿ, ಉದಯ ನಾಯ್ಕ, ಬರ್ಗಿ,ರಂಜು ಹಿಚ್ಕಡ,

ಯುವ ಮೀನುಗಾರರ ಪ್ರಮಖ ಧೀರಜ್ ಬಾನಾವಳಿಕರ, ಮಂಜುನಾಥ ರಾಮಚಂದ್ರ ನಾಯಕ,. ಹಿಚ್ಕಡ, ಮಂಜುನಾಥ ಕನ್ಸಿಟನ್ಸಿಯ ಮಾಲಕ ಪ್ರಶಾಂತ ನಾಯಕ, ದಿನೇಶ ನಾಯ್ಕ.ಮುರ್ಡೇಶ್ವರ, ಸಹಕಾರಿಯ ವ್ಯವಸ್ಥಾಪಕ ಆದಿತ್ಯ ಶೆಟ್ಟಿ, ಗುಮಾಸ್ತೆ ಸೋನಂ ನಾಯ್ಕ, ಸತ್ಯನಾರಾಯಣ ನಾಯಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.