ಸುದ್ದಿಬಿಂದು ಬ್ಯೂರೋ
ಗೋಕರ್ಣ : ಪ್ರವಾಸಿಗನೋರ್ವ ಸಮುದ್ರದಲ್ಲಿ ಈಜಲು ಹೋಗಿದ್ದ ವೇಳೆ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ದುಬ್ಬನಸಸಿಯಲ್ಲಿ ನಡೆದಿದೆ.

ಸೂರ್ಯಶಿವ ನಾರಾಯಣ ಪಾಂಡೆ(24), ಮೃತ ಯುವಕನಾಗಿದ್ದಾನೆ.ಮೃತ ಯುವಕ ದೆಹಲಿ ಮೂಲದವನು ಎಂಬುದು ಗೋತ್ತಾಗಿದೆ. 24ಸ್ನೇಹಿತರು ಸೇರಿಕೊಂಡು ದೆಹಲಿಯಿಂದ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ.

ಗೋಕರ್ಣ ಪ್ರವಾಸಕ್ಕೆ ಬಂದವರು ನಿನ್ನೆ ರಾತ್ರಿ ಸ್ಥಳೀಯ ರೆರ್ಸಾಟ್ ಒಂದರಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದ್ದು, ಇಂದು ಮಧ್ಯಾಹ್ನದ ವೇಳೆ ಈಜಾಡಲು ಸಮುದ್ರಕ್ಕೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆಯಲ್ಲಿ ಸೂರ್ಯಶಿವ ನಾರಾಯಣ ಪಾಂಡೆ ಈಜಾಡಲು ಸಮುದ್ರಕ್ಕೆ ಇಳಿದಿದ್ದು, ಸಮುದ್ರದ ಅಲೆಗೆ ಸಿಲುಗಿ ಆತ ಮೃತಪಟ್ಟಿರುವುದಾಗಿ ಗೋತ್ತಾಗಿದೆ.

ಇನ್ನೂ ಮೃತ ದೆಹವನ್ನ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆ ತೆಗೆದುಕೊಂಡು ಹೋಗಿ ಇಡಲಾಗಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.