www.suddibindu.in
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭ ಜೋರಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವು ಕಡೆಯಲ್ಲಿ ತೋಟ,ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆಯಿಂದಾಗಿ ಜಿಲ್ಲೆಯ ಯಾವೇಲ್ಲಾ ಕಡೆ ಹಾನಿ ಉಂಟಾಗಿದೆ ಎನ್ನುವ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ಚಂಡಿಕಾ ಹೊಳೆ ಉಕ್ಕಿ ಹರಿದ ಪರಿಣಾಮ ಕುಮಟಾ ಶಿರಸಿ ರಸ್ತೆಯಲ್ಲಿ‌ ಬೆಂಗಳೂರಿನಿಂದ ಕುಮಟಾಕ್ಕೆ ಬರುತ್ತಿದ್ದ ಖಾಸಗಿ ಬಸ್ ಕತಗಾಲ ಬಳಿ ಸಿಲುಕಿಕೊಂಡು ಪ್ರಯಾಣಿಕರು ಪರದಾಡುವಂತಾಗಿದ್ದು,‌ಹೆದ್ದಾರಿ ಬಂದ್ ಆಗಿದೆ. ವ್ಯಾಪಕ ಮಳೆ ಉಂಟಾ ಪರಿಣಾಮ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಹೊನ್ನಾವರ ತಾಲೂಕಿನ ಗುಂಡವಾಳ ನದಿ ಉಕ್ಕಿ ಹರಿಯುತ್ತಿದ್ದು ಮನೆಗಳಿಗೆ ನೀರು ನುಗ್ಗಿ ಉಂಟಾಗಿ ಅಲ್ಲಿನ ನಿವಾಸಿಗಳನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ‌ಮಾಡಲಾಗಿದೆ.

ಇದನ್ನೂ ಓದಿ

ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಸಹ ಮಳೆ ಅವಾಂತರಕ್ಕೆ ದಿನಕರ ನಾಯ್ಕ ಅವರ ಕೌಂಪೌಂಡ್ ಒಳಗೆ ನೀರು ನುಗ್ಗಿ ಶೆಡ್ ಒಳಗಡೆ ಇದ್ದ ಲಕ್ಷಾಂತರ ರೂಪಾಯಿ ಬೆಲೆ‌ಬಾಳುವ ಸೌಂಡ್ ಸಿಸ್ಟಂ ಸಂಪೂರ್ಣವಾಗಿ ನೀರಿನಲ್ಲಿ‌ ಮುಳುಗಡೆಯಾಗಿ ಸುಮಾರು 10ಲಕ್ಷಕ್ಕೂ ಅಧಿಕ ಹಾನಿ ಉಂಟಾಗಿದೆ.ಇನ್ನೂ ನಾರಾಯಣ ನಾಯ್ಕ ಅವರ ಗಿರಣಿ ಅಂಗಡಿ ಸೇರಿದಂತೆ ತೋಟಗಳಿಗೂ ನೀರು ನುಗ್ಗಿ ಹಾನಿ ಉಂಟಾಗಿದೆ.ಅದೇ ರೀತಿ ಗ್ರಾಮದ ಹಲವು ಭಾಗದಲ್ಲಿ ಮಳೆಯಿಂದಾಗಿ ಸಾಕಷ್ಟು ಅನಾಹುತ ಉಂಟಾಗಿದೆ.

ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿನ ಎಲ್ಲಾ ಜಲಪಾತಗಳು ತುಂಬಿ ಹರಿಯುತ್ತಿದ್ದು, ಜಲಪಾತದ ವೀಕ್ಷಣೆಗೆ ಹೋಗದಂತೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಹೊನ್ನಾವರ ಸಮೀಪ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವರ್ನಕೇರಿ ಸಮೀಪ ಗುಡ್ಡ ಕುಸಿತ ಉಂಟಾಗಿ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದ ಭಾರೀ ಗಾತ್ರದ ಮರುಗಳು ನೆಲ್ಕುರಿಳಿ ಬಿದ್ದ ಪರಿಣಾಮ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.

ಭಾರೀ ಮಳೆ ಪರಿಣಾಮವಾಗಿ ಜಿಲ್ಲೆಯಲ್ಲಿನ ಅಘನಾಶಿನಿ,ಗಂಗಾವಳಿ ನದಿ ಸೇರಿದಂತೆ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿನ ಜನ ಆತಂಕ್ಕೆ ಒಳಗಾಗಿದ್ದಾರೆ. ಈಗಾಗಲೇ ನದಿ ತೀರದಲ್ಲಿ ವಾಸವಾಗಿರವ ಜನರಿಗೆ ಸುರಕ್ಷಿತವಾಗಿ ಇರುವಂತೆ ಸೂಚನೆ ಕೂಡ ನೀಡಲಾಗಿದೆ. ಜಿಲ್ಲೆಯಲ್ಲಿ ಇನ್ನೂ ಸಹ ಮಳೆ ಅಬ್ಬರ ಮುಂದುವರೆದಿದ್ದು,ನೆರೆ ಉಂಟಾಗುವ ಸಾಧ್ಯತೆ ಎದುರಾಗಿದೆ.