Lok Sabha Elections 2024
suddibindu.in
ಶಿರಸಿ: ಲೋಕಸಭಾ ಚುನಾವಣೆ ಘೋಷಣೆಗೆ ಕೆಲ ದಿನಗಳು ಮಾತ್ರ ಉಳಿದುಕೊಂಡಿದ್ದು,ರಾಜಕೀಯ ಪಕ್ಷಗಳು ಗೆಲ್ಲುವ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಲಿದೆ.ಈ ನಡುವೆ ಉತ್ತರಕನ್ನಡ ಲೋಕಸಭಾ (Uttar Kannada Lok Sabha) ಕ್ಷೇತ್ರದ ಬಿಜೆಪಿ ಟಿಕೆಟ್‌ನ ಪ್ರಭಲ ಆಕಾಂಕ್ಷಿಯಾಗಿರುವ ಅನಂತಮೂರ್ತಿ ಹೆಗಡೆ ಅವರನ್ನ ಬಿಜೆಪಿ ನಾಯಕರು ದೆಹಲಿಗೆ ಕರೆಸಿಕೊಂಡಿದ್ದಾರೆ..
ಈ ಭಾರೀ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಿಗೆ ಟಿಕೆಟ್ ನೀಡುವುದು ಅನುಮಾನ ಎನ್ನಲಾಗುತ್ತಿದೆ.ಹೀಗಾಗಿ ಈ ಭಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ.ಆ ಸಾಲಿನಲ್ಲಿ ಅನಂತಮೂರ್ತಿ ಹೆಗಡೆ ಸಹ ಒಬ್ಬರು. ಅನಂತಮೂರ್ತಿ ಹೆಗಡೆಯವರು ಕಳೆದ ಒಂದು ವರ್ಷಕ್ಕೂ ಹಿಂದಿನಿಂದ ಕ್ಷೇತ್ರದ ತುಂಬಾ ಓಡಾಟ ನಡೆಸಿ ಜನರ ಸಮಸ್ಯೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಜನರ ಕಷ್ಟಕ್ಕೆ ಸ್ಪಂಧಿಸುತ್ತಾ ಬಂದಿದ್ದಾರೆ.ಪ್ರಮುಖವಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಆಗಬೇಕು ಎನ್ನುವ ಬಗ್ಗೆ ಶಿರಸಿಯಿಂದ ಕಾರವಾರ 140 ಕಿಲೋಮಿಟರ್ ಹಾಗೂ ಕುಮಟಾದಿಂದ ಭಟ್ಕಳದ ತನಕ ಪಾದಯಾತ್ರೆ ಜೊತೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸಹ ಪ್ರತಿಭಟನೆ ಮಾಡುವ ಮೂಲಕ ಸರಕಾರದ ಗಮನ ಸೆಳೆದಿದ್ದಾರೆ.

ಇದು ಅವರ ಹೋರಾಟದ ಒಂದು ಭಾಗವಾದರೆ ಇನ್ನೂ ಜಿಲ್ಲಾದ್ಯಂತ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಜೊತೆಗೆ ಪ್ರತಿಯೊಬ್ಬ ಆಟೋ ಚಾಲಕರ ಕುಟುಂಬಗಳಿಗೆ (Insurance)ಇನ್ಸೂರೆನ್ಸ್ ಮಾಡಿಸುವ ಮೂಲಕ ಆಟೋ ಚಾಲಕರ ಕುಟುಂಬದ ನೆರವಿಗೆ ನಿಂತಿದ್ದಾರೆ. ಇದರೊಂದಿಗೆ ಕೊನೆಗೌಡರಿಗೂ ಸಹ ಇನ್ಸೂರೆನ್ಸ್ ಮಾಡಿಸಿ ಬರವರ ಪರ ನಿಂತಿದ್ದಾರೆ.ಅಷ್ಟೆ ಅಲ್ಲದೆ ಜಿಲ್ಲೆಯ ಬಹುತೇಕ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅತೀ ಅವಶ್ಯಕವಾಗಿದ್ದ ಬೇಕಾಗಿರುವ ಶುದ್ದಕುಡಿಯುವ ನೀರಿನ ಘಟಕವನ್ನ ಸ್ಥಾಪನೆ ಮಾಡಿ ಜನರ ಮೆಚ್ಚುಗೆ ಪಡೆದಿದ್ದಾರೆ.
ಇದನ್ನೂ ಓದಿ:-
- Today gold and silver rate : ಬಂಗಾರ ಖರೀದಿಸುವವರಿಗೆ ಇಂದು ಗುಡ್ ನ್ಯೂಸ್
- ಕೊಲೆಯಾದ 18 ತಿಂಗಳ ಬಳಿಕ ಮನೆಗೆ ಬಂದ “ಲಲಿತಾ”
- Breaking News| ವಿಧಾನ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ.!
ಹೀಗೆ ಅಧಿಕಾರದಲ್ಲಿ ಇಲ್ಲದೆ ಇದ್ದರೂ ಕೂಡ, ಜನಪರವಾದ ಕೆಲಸವನ್ನ ಮಾಡುವ ಮೂಲಕ ಜಿಲ್ಲೆಯ ಜನರ ಮನಗೆದ್ದಿದ್ದಾರೆ.ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಜನ ಇವರ ಜನ ಸೇವೆಯನ್ನ ನೋಡಿ ನಮ್ಮ ಜಿಲ್ಲೆಗೆ ಇಂತಹ ಜನಪ್ರತಿನಿಧಿಗಳು ಇದ್ದರೆ ಜನರ ಉದ್ಧಾರವಾಗಲು ಸಾಧ್ಯ ಎನ್ನುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.ತಮ್ಮ ಹೋರಾಟ,ಜನರಪ ಕಾರ್ಯಗಳ ಜೊತೆಗೆ ಬಿಜೆಪಿಯಲ್ಲಿಯೂ ಸಕ್ರೀಯವಾಗಿ ಕೆಲಸ ಮಾಡುವ ಮೂಲಕ ಇದೀಗ ಹೈಕಮಾಂಡ ಸಹ ಅವರನ್ನ ಗಮ ಗುರುತಿಸುವಂತೆ ಮಾಡಿದೆ.
ಅನಂತಮೂರ್ತಿ ಅವರು ಮಾಡಿರುವ ಜನಪರ ಕಾರ್ಯ ಹಾಗೂ ಅಲ್ವ ಅವಧಿಯಲ್ಲೆ ಜಿಲ್ಲೆಯ ಜನ ಅವರನ್ನ ಗುರುತಿಸುವಂತೆ ಮಾಡಿರುವುದು ಅವರ ರಾಜಕೀಯ ಭವಿಷ್ಯಕ್ಕೆ ದಾರಿ ಆದಂತಾಗಿದೆ.ಅನಂತಮೂರ್ತಿ ಅವರ ಬಗ್ಗೆ ಮಾಹಿತಿ ಕಲೆ ಹಾಕಿರುವ ಬಿಜೆಪಿ ನಾಯಕರು, ನೆರವಾಗ ಅನಂತಮೂರ್ತಿ ಅವರನ್ನ ದೆಹಲಿಗೆ ಕರೆಸಿಕೊಂಡು ಕೆಲವು ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಅನಂತಮೂರ್ತಿ ಹೆಗಡೆ ಅವರು ದೆಹಲಿಯಲ್ಲಿಯೇ ಉಳಿದುಕೊಂಡಿದ್ದು, ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಅನಂತಮೂರ್ತಿ ಹೆಗಡೆ ಸಹ ತಾವು ಕ್ಷೇತ್ರದಲ್ಲಿ ಇದುವರೆಗೂ ಮಾಡಿರುವ ಕಾರ್ಯವನ್ನ ನಾಯಕರ ಎದುರು ತೆರೆದಿಟ್ಟಿದ್ದಾರೆ.ಪಕ್ಷ ಟಿಕೆಟ್ ನೀಡಿದರೆ ತಾನು ಸ್ಪರ್ಧೆ ಮಾಡಲು ಸಿದ್ದರಿರೋದಾಗಿ ಪಕ್ಷದ ನಾಯಕರ ಎದುರು ಹೇಳಿಕೊಂಡಿದ್ದಾರೆನ್ನಲಾಗಿದೆ.ಈ ಎಲ್ಲಾ ರಾಜಕೀಯ ಬೆಳವಣಿಗೆಯನ್ನ ಗಮಸಿದರೆ ಬಿಜೆಪಿ ಹೈಕಮಾಂಡ ಈ ಬಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹೊಸಬರಿಗೆ ಟಿಕೆಟ್ ನೀಡಲು ಮುಂದಾಗಿರುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ..