ಸುದ್ದಿಬಿಂದು ಬ್ಯೂರೋ
ಮೈಸೂರು : ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ರಿಲೀಸ್ ಆಗಿದ್ದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ರಾಮದಾಸ್ ಅವರಿಗೆ ಕೈ ತಪ್ಪಿದೆ. ಇದರಿಂದಾಗಿ ಬೇಸರಕ್ಕೆ ಒಳಗಾಗಿರುವ ರಾಮದಾಸ್ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ರಾಮದಾಸ್ ಅವರಿಗೆ ಬಿಜೆಪಿಯ ಮೂರನೇ ಪಟ್ಟಿಯಲ್ಲಾದ್ದರೂ ಟಿಕೆಟ್ ಸಿಗಬಹುದು ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಅದರಲ್ಲೂ ಟಿಕೆಟ್ ಮಿಸ್ ಆಗಿದೆ. ಇದರಿಂದಾಗಿ ಶಾಸಕ ರಾಮದಾಸ್ ಹಾಗೂ ಅವರ ಆಪ್ತರಲ್ಲಿ ಅಸಮಾಧಾನ ಉಂಟಾಗಿದೆ.

ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ರಾಮದಾಸ್ ಇಂದು ತಮ್ಮ ಆಪ್ತರ ಜೊತೆ ಮಾತುಕತೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಅಸಮಾಧಾನಕ್ಕೆ ಒಳಗಾಗಿರುವ ರಾಮದಾಸ್ ಅವರನ್ನ ಈಗಾಲೆ ಪಕ್ಷದ ಹಲವು ನಾಯಕರು ಸಂಪರ್ಕಿಸಿ ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ. ಆದರೆ ರಾಮದಾಸ್ ಮುಂದೆ ರಾಜೀನಾಮೆ ನೀಡಬೇಕೋ ಬೇಡವೋ ಎನ್ನುವ ಬಗ್ಗೆ ಇಂದೆ ತೀರ್ಮಾನಿಸುವ ಸಾಧ್ಯತೆ ಇದೆ.

ಒಂದು ವೇಳೆ ಅವರು ರಾಜೀನಾಮೆ ನಿರ್ಧಾರ ತೆಗೆದುಕೊಂಡರೆ ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ‌.