ಸುದ್ದಿಬಿಂದು ಬ್ಯೂರೋ
ಶಿರಸಿ : ಬಿಜೆಪಿ ಟಿಕೆಟ್ ಕೈ ತಪ್ಪಿರುವ ಹಿನ್ನಲೆಯಲ್ಲಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೇಟ್ಟರ್ ಇಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಇದೀಗ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಟಿಕೆಟ್ ಕೈ ತಪ್ಪಿರುವುದಕ್ಕೆ ಜಗದೀಶ ಶೇಟ್ಟರ್ ಕಳೆದ ಮೂರ ನಾಲ್ಕು ದಿನಗಳಿಂದ ತಮ್ಮ ಅಸಮಧಾನ ಹೊರಹಾಕುತ್ತಾ ಬಂದಿದ್ದರು.ಶೇಟ್ಟರ್ ಅಸಮಧಾನದ ಬಳಿಕ ಪಕ್ಷದ ಅನೇಕ ನಾಯಕರು ಹುಳ್ಳಿಯಲ್ಕಿರುವ ಜಗದೀಶ ಶೇಟ್ಟರ್ ಅವರ ನಿವಾಸಕ್ಕೆ ಬಂದು ಹಲವು ಸುತ್ತಿನ ಮಾತುಕತೆ ಕೂಡ ನಡೆಸಿದ್ದು.
ಯಾವುದೇ ಕಾರಣಕ್ಕೂ ಪಕ್ಷ ತೊರೆಯಬಾರದು. ನಿಮ್ಮ ಬದಲಿಗೆ ಕುಟುಂಬದಲ್ಲಿ ಬೇರೆ ಯಾರಿಗಾದ್ರೂ ಪಕ್ಷದಿಂದ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಶೇಟ್ಟರ್ ನಮ್ಮ ಕುಟುಂಬದಲ್ಲಿ ಮತ್ತೆ ಯಾರೂ ಸ್ಪರ್ಧೆ ಮಾಡಲ್ಲ.ನನಗೆ ಟಿಕೆಟ್ ನೀಡಬೇಕು, ಯಾವ ಕಾರಣಕ್ಕೆ ನನಗೆ ಟಿಕೆಟ್ ನೀಡುತ್ತಿಲ್ಲ.ಯಾವುದೇ ಭೃಷ್ಟಾಚಾರ ಆರೋಪವಾಗಲಿ, ಸಿಡಿ ಪ್ರಕರಣವಾಗಲಿ ನನ್ನ ಮೇಲಿಲ್ಲ.
ಪಕ್ಷವನ್ನ ತಳಮಟ್ಟದಿಂದ ಕಟ್ಟಿ ಬೆಳಸಿದ ನನಗೆ ಟಿಕೆಟ್ ನೀಡುತ್ತಿಲ್ಲ ಎಂದರೆ ಪಕ್ಷದ ತತ್ವಸಿದ್ದಾಂತಾಕ್ಕೆ ಬೆಲೆ ಎಲ್ಲಿದೆ ಎಂದು ಪ್ರಶ್ನಿಸಿದ್ದರು.ಹೀಗಾಗಿ ನಿನ್ನೆ ತಡರಾತ್ರಿಯವರೆಗೆ ಮಾತುಕತೆ ನಡೆಸಿದ ಬಿಜೆಪಿ ನಾಯಕರು ಶೇಟ್ಟರ್ ಮನವಲಿಸುವಲ್ಲಿ ವಿಫಲರಾಗಿ ವಾಪಸ್ ಪ್ರಯಾಣ ಬೆಳಸಿದ್ದರು.
ಈ ಪಕ್ಷದಲ್ಲಿ ಸಂಘಟನೆ ಮಾಡಿದವರಿಗೆ ಬೆಲೆಯಿಲ್ಲ ಎಂದು ಅರಿತ ಶೇಟ್ಟರ್, ಇಂದು ಬಿಜೆಪಿಗೆ ರಾಜೀನಾಮೆ ನೀಡುವ ಮೂಲಕ ಸುದೀರ್ಘ ವರ್ಷಗಳ ಕಾಲ ಬಿಜೆಪಿಯನ್ನ ಕಟ್ಟಿ ಬೆಳೆಸಿ ಪಕ್ಷದಿಂದ ಹೊರ ನಡೆದಿದ್ದಾರೆ. ಶೇಟ್ಟರ್ ರಾಜೀನಾಮೆಯಿಂದಾಗಿ ಬಿಜೆಪಿಗೆ ಬಹುದೊಡ್ಡ ಆಘಾತವಾಗಿದ್ದು, ಸದ್ಯ ಅದನ್ನ ಅರಗಿಸಿಕೊಳ್ಳುವುದು ಬಿಜೆಪಿಗೆ ಅಷ್ಟು ಸುಲಭವಾಗಿರಲಿಕ್ಕುಲ್ಲ.