suddibindu.in
ಚಿತ್ರದುರ್ಗ: ಬೆಂಗಳೂರಿಂದ ಗೋಕರ್ಣಕ್ಕೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು 25ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಳಲ್ಕೆರೆ ತಾಲೂಕಿನ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.
ನಸುಕಿನ ಜಾವದಲ್ಲಿ ಎಲ್ಲರೂ ಗಾಡ ನಿದ್ರೆಯಲ್ಲಿದ್ದರು, ಬೆಂಗಳೂರಿನಿಂದ ಗೋಕರ್ಣಕ್ಕೆ ಸೇರುತ್ತೇವೆ ಅಂತ ಎಲ್ಲ ಪ್ರಯಾಣಿಕರು ಅಂದುಕೊಂಡಿದ್ದರು ಆದರೆ ವಿಧಿ ವಿಧಿ ಆಟವೇ ಬೇರೆಯಾಗಿದೆ. ಖಾಸಗಿ ಸ್ಲೀಪರ್ ಕೋಚ್ ಬಸ್ ಒಂದು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವನಪ್ಪಿದ್ದಾರೆ.
ಇದನ್ನೂ ಓದಿ
- “ಚೆಕ್ ವಿತರಣೆ ಆಯ್ತು, ಹಣ ಮಾತ್ರ ಬಂದಿಲ್ಲ: ಸಿಬರ್ಡ್ ನಿರಾಶ್ರಿತರಿಗೆ ನಿರಾಶೆ”
- ಜಿಲ್ಲಾ ಪಂಚಾಯತ ಸಿಇಒ ಈಶ್ವರ ಕಾಂದೂ ವರ್ಗಾವಣೆ
- ರೇಬೀಸ್ ಹೋರಿಯಿಂದ ರಂಪಾಟ: ವ್ಯಕ್ತಿಗೆ ತಿವಿತ
ಅಪಘಾತದಲ್ಲಿ ಗಾಯಗೊಂಡವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಹಾಗೂ ಹೊಳಲ್ಕೆರೆ ಆಸ್ಪತ್ರೆ ರವಾನೆ ಮಾಡಲಾಗಿದೆ ಘಟನಾ ಸ್ಥಳಕ್ಕೆ ಹೊಳಲ್ಕೆರೆ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
