ಸುದ್ದಿಬಿಂದು ಬ್ಯೂರೋ
ಬೆಂಗಳೂರು : ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ದಿನ ಹತ್ತಿರವಾಗುತ್ತಾ ಬಂದರು ಸಹ ಬಿಜೆಪಿ ಮಾತ್ರ ರಾಜ್ಯದ ಯಾವ ಒಂದು ಕ್ಷೇತ್ರದಲ್ಲಿಯೂ ಸಹ ಅಭ್ಯರ್ಥಿ ಹೆಸರು ಘೋಷಣೆ ಮಾಡಿಲ್ಲಿ.ಆದರೆ ರಾಜ್ಯದ ಕೆಲವು ಆಕಾಂಕ್ಷಿಗಳಿಗೆ ಹೈಕಮಾಂಡ ಮೆಸೇಜ್ ಮಾಡಿ ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಏಪ್ರೀಲ್ 13ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಆದರೂ ಸಹ ಬಿಜೆಪಿ ಅಭ್ಯರ್ಥಿಗಳನ್ನ ಘೋಷಣೆ ಮಾಡದೆ ಇರುವುದು, ಪಕ್ಷ ಸಂಘಟನೆಗೆ ಭಾರೀ ಹಿನ್ನಡೆ ಕೂಡ ಉಂಟಾಗಿದೆ. ಮಾಜಿ ಶಾಸಕರು ಹಾಗೂ ಪ್ರಬಲ ಆಕಾಂಕ್ಷಿಗಳು ಟಿಕೆಟ್ ಗಾಗಿ ಬೆಂಗಳೂರು, ದೆಹಲಿಯಲ್ಲಿ ಲಾಭಿ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಈಗಾಗಲೆ ರಾಜ್ಯದಿಂದ ಕೇಂದ್ರಕ್ಕೆ ರವಾನೆಯಾಗಿದ್ದು, ಬಹುತೇಕ ಏಪ್ರೀಲ್ 8-9ಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ.
ಈಗಾಗಲೆ ಕ್ಷೇತ್ರ ಬಿಟ್ಟು ಬೆಂಗಳೂರು, ದೆಹಲಿಯಲ್ಲಿ ಟಿಕೆಟ್ ಲಾಬಿ ನಡೆಸುತ್ತಿದ್ದಾರೆ.ಇವರಲ್ಲಿ ಯಾರಿಗೆ ಟಿಕೆಟ್ ಪೈನಲ್ ಆಗಬಹುದೋ ಅಂತಹವರಿಗೆ ತಕ್ಷಣ ನೀವುವನಿಮ್ಮ ನಿಮ್ಮ ಕ್ಷೇತ್ರಕ್ಕೆ ಹೋಗಿ ಸಂಘಟನೆ ಮುಂದಾಗಿ ಎಂದು ರಾಜ್ಯದ ಪ್ರಮುಖ ನಾಯಕರು ಹೇಳಿಕಳುಹಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೆಲವರು ಒಂದೇರಡು ದಿನಗಳಿಂದ ತಮ್ಮಗೆ ಟಿಕೆಟ್ ಪಕ್ಕಾ ಆಗಿರುವುದನ್ನ ತಿಳಿದುಕೊಂಡು ಕ್ಷೇತ್ರಕ್ಕೆ ವಾಪಸ್ ಆಗಿದ್ದಾರೆನ್ನಲಾಗಿದೆ.
ಇನ್ನೂ ಯಾರಿಗೆಲ್ಲಾ ಟಿಕೆಟ್ ಫೈನಲ್ ಆಗಿದೆ ಅಂತಹವರಿ ವಾಟ್ಸಾಪ್ ಮೆಸೇಜ್ ಮಾಡಿ ನಾಮಪತ್ರ ಸಲ್ಲಿಕೆಗೆ ಎಲ್ಲಾ ದಾಖಲೆಗಳನ್ನ ಸಿದ್ದ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆನ್ನಲಾಗಿದೆ. ಟಿಕೆಟ್ ಆಗಿರುವ ಅಭ್ಯರ್ಥಿಗಳು ಇದೀಗ ನಾಮಪತ್ರ ಸಲ್ಲಿಕೆಗೆ ಬೇಕಾಗಿರುವ ದಾಖಲೆಗಳನ್ನ ಸಿದ್ದತೆ ಮಾಡಿಕೊಳ್ಳಲು ಮುಂದಾಗಿರುವುದು ಕೆಲ ಬಿಜೆಪಿ ಅಭ್ಯರ್ಥಿ ಆಪ್ತರಿಂದ ಕೇಳಿ ಬಂದಿದೆ..