ಕಾರವಾರ: ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ವೇಳೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮೀನುಗಾರರಿಗೆ ಭಾರತೀಯ ನೌಕಾಪಡೆ ನೆರವಾಗಿದೆ.

‘ಬಾಲ ಪದ್ಮಾವತಿ’ ಎಂಬ ಮೀನುಗಾರಿಕಾ ಬೋಟು ಕಾರವಾರ ವ್ಯಾಪ್ತಿಯಿಂದ ಹೊರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ಮೀನುಗಾರ ಸುಟ್ಟ ಗಾಯಗಳಿಂದ ನರಳುತ್ತಿದ್ದ.

ಈ ಬಗ್ಗೆ ಬೋಟ್ ನಿಂದ ಬಂದ ಮಾಹಿತಿಯಾಧಾರದಲ್ಲಿ ಸ್ಥಳಕ್ಕೆ ತೆರಳಿದ ಭಾರತೀಯ ನೌಕಾಪಡೆಯ ಹಡಗು ‘ನಿರೀಕ್ಷಕ್‌’ನ ವೈದ್ಯಕೀಯ ತಂಡ ತುರ್ತು ವೈದ್ಯಕೀಯ ನೆರವು ನೀಡಿದೆ.