ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟ ದರ್ಶನ್ಗೆ ಅವರಿಗೆ ಜಾಮೀನು ನೀಡಲು ಬೆಂಗಳೂರು ಸೆಷನ್ಸ್ ನ್ಯಾಯಾಲ ನಿರಾಕರಿಸಿದ್ದು ದರ್ಶನ್ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. 120ಕ್ಕೂ ಹೆಚ್ಚು ದಿನಗಳ ಕಾಲ ಜೈಲಿನಲ್ಲಿ ಕಾಲ ಕಳೆದಿರುವ.ನಟ ದರ್ಶನ್ಗೆ ಜೈಲುವಾಸವೇ ಗತಿಯಾಗಿದೆ.
ದರ್ಶನ್ ಗೆ ಇಂದು ಜಾಮೀನು ಸಿಗಬಹುದು ಎಂದು ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರ ಇಂದೂ ಕೂಡ ನ್ಯಾಯಾಲಯ ದರ್ಶನ್ ಜಾಮೀನು ನಿರಾಕರಣೆ ಮಾಡಿರುವುದರಿಂದ ಡಿ ಬಾಸ್ ಇನ್ನಷ್ಟು ದಿನ ಜೈಲಿನಲ್ಲೆ ಕಾಲ ಕಳೆಯಬೇಕಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಗೌಡ, ಎಂ ಲಕ್ಷ್ಮಣ್, ಆರ್ ನಾಗರಾಜು, ರವಿಶಂಕರ್ ಮತ್ತು ದೀಪಕ್ ಕುಮಾರ್ ಅವರ ಜಾಮೀನು ಅರ್ಜಿಗಳಿಗೆ ಸಂಬಂಧಿಸಿದ ಆದೇಶವನ್ನು ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಜೈಶಂಕರ್ ಅವರು ಸೋಮವಾರ ಪ್ರಕಟಿಸಿದ್ದಾರೆ.
ಗಮನಿಸಿ
- ಮೀನುಗಾರ ಯುವಕನ ನಿಧನಕ್ಕೆ ರೂಪಾಲಿ ನಾಯ್ಕ ಸಂತಾಪ, ಹೆಚ್ಚಿ ಪರಿಹಾರಕ್ಕೆ ಆಗ್ರಹ
- RSS/ಆರ್ಎಸ್ಎಸ್ ಪ್ರಾಯೋಜಿತ ದುಷ್ಕರ್ಮಿಗಳ ಬೆದರಿಕೆ ಪದಗಳನ್ನ ಖಂಡಿಸುತ್ತೇವೆ:ನಿವೇದಿತ್ ಆಳ್ವಾ
- ಎಷ್ಟೇ ಅಪಪ್ರಚಾರ ಮಾಡಿದರೂ ಸ್ಫರ್ಧೆಯಿಂದ ಹಿಂದೆ ಸರಿಯುವುದಿಲ್ಲ: ಸರಸ್ವತಿ ಎನ್. ರವಿ
.