ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಓಸಿ ಮಟ್ಕಾ ತೆಗೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ತರಕಾರಿ ಅಂಗಡಿ ಹಾಗೂ ಮನೆ ಮೇಲೆ ದಾಳಿ ನಡೆಸಿದ 73 ಸಾವಿರ ನಗದು ಹಾಗೂ ಇಬ್ಬರನ್ನ ವಶಕ್ಕೆ ಪಡೆದಿರುವ ಘಟನೆ ಹಂದಿಗೋಣ ಗ್ರಾಮದಲ್ಲಿ ನಡೆದಿದೆ.
ಪ್ರದೀಪ ದತ್ತು ಪಟಗಾರ ಅವರ ಮನೆ ಹಾಗೂ ತರಕಾರಿ ಅಂಗಡಿ ಮೇಲೆ ಕುಮಟಾ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ಸಮಯದಲ್ಲಿ ಮಂಜುನಾಥ ಮುಕ್ರಿ ಎಂಬುವವರು ಓಸಿ ನಂಬರ್ ಬರೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಓಸಿ ಆಟದಿಂದ ಸಂಗ್ರವಾಗಿದ್ದ 73 ಸಾವಿರದ 100 ರೂಪಾಯಿ ನಗದು ಹಾಗೂ ಓಸಿ ಆಟದ ಪಟ್ಟಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ…
ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಕುಮಟಾ ಇನ್ಸ್ಪೆಕ್ಟರ್ ಯೋಗೇಶ ಕೆ ಎಂ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಮನಿಸಿ