suddibindu.in
ಅಂಕೋಲಾ : ಈಗಾಗಲೇ ರಾಷ್ಟ್ರೀಯ ಹೆದ್ದಾರಿ 66ರ ಶಿರೂರಿನಲ್ಲಿ ಗುಡ್ಡಕುಸಿತ ಉಂಟಾಗಿ ಹನ್ನೊಂದು ಮಂದಿಯ ಜೀವ ಗುಡ್ಡದ ಬಲಿಪಡೆದಿದೆ.ಇದರಿಂದ ಪಕ್ಕದ ಉಳುವರೆ ಗ್ರಾಮದ ಆರೇಳು ಮನೆಗಳು ನೆಲಸಮವಾಗಿದೆ.ಇದರ ನಡುವೆ ಉಳುವರೆ ಗುಡ್ಡದಲ್ಲಿ ರೆರ್ಸಾಟ್ ಒಂದು ನಿರ್ಮಾಣವಾಗುತ್ತಿರುವಂತಿದೆ.

ಈಗಾಗಲೇ ಉತ್ತರಕನ್ನಡ ಜಿಲ್ಲೆಯ ಶಿರೂರು ಸೇರಿದಂತೆ ಕೇರಳದ ವಯನಾಡು ಗುಡ್ಡಕುಸಿತವಾಗಿ ಅದೆಷ್ಟೋ ಜೀವಗಳು ಬಲಿಯಾಗಿದೆ. ಇದಕ್ಕೆಲ್ಲಾ ಅರಣ್ಯದಲ್ಲಿ ಗುಡ್ಡಕೊರೆದು ರೆಸಾರ್ಟ್ ಹಾಗೂ ಅಭಿವೃದ್ಧಿ ಹೆಸರಲ್ಲಿ ಗುಡ್ಡಕೊರೆದಿರುವುದೆ ಕಾರಣ ಎನ್ನಲಾಗುತ್ತಿದೆ. ಈ ನಡುವೆ ಶಿರೂರು ಗುಡ್ಡಕುಸಿತದಿಂದ ಉಳುವರೆ ಗ್ರಾಮದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರೆ ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ
- temple theft/ದೇವಸ್ಥಾನದ ಕಳ್ಳತನ ಪ್ರಕರಣ ಭೇದಿಸಿದ ಶಿರಸಿ ಗ್ರಾಮೀಣ ಪೊಲೀಸರು : ಇಬ್ಬರು ಆರೋಪಿತರ ಬಂಧನ
- ಕುಮಟಾ-ಬಳ್ಳಾರಿ ಬಸ್ ಪಲ್ಟಿ :49 ಪ್ರಯಾಣಿಕರಿಗೆ ಗಾಯ : ಗಾಯಾಳುಗಳು ಆಸ್ಪತ್ರೆಗೆ ದಾಖಲು
- ಬರ್ಗಿಯಲ್ಲಿ ತಪ್ಪಿದ್ದ ಮತ್ತೊಂದು ಬೆಂಕಿ ದುರಂತ
ಆದರೆ ಇದೀಗ ಗುಡ್ಡಕುಸಿತದ ಭೀಕರತೆಯನ್ನ ಕಣ್ಣಾರೆ ಕಂಡಿರುವ ಉಳುವರೆ ಗ್ರಾಮದ ಗುಡ್ಡದಲ್ಲಿ ಗಂಗಾವಳಿ ನದಿಯ ತೀರದಲ್ಲೇ ಭಾರೀ ಪ್ರಮಾಣದಲ್ಲಿ ಗುಡ್ಡಕೊರೆದು ಅಲ್ಲಿ ರೆಸಾರ್ಟ್ ನಿರ್ಮಾಣ ಮಾಡಲಾಗತ್ತಿದೆ ಎನ್ನುವ ಮಾತು ಕೇಳಿ ಬರತ್ತಿದೆ.ಕೊರೆದಿರುವ ಗುಡ್ಡ ಖಾಸಗಿ ಜಾಗ ಎನ್ನುವ ಮಾಹಿತಿ ಸಹ ಇದೆ. ಆದರೆ ಅದು ಖಾಸಗಿ ಜಾಗವೇ ಆಗಿದ್ದರು ಸಹ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗುಡ್ಡ ಕೊರೆಯಲು ಅವಕಾಶ ನೀಡಿದವರು ಯಾರು. ಅನುಮತಿ ಪಡೆದೆ ಕೊರೆಯಲಾಗಿದೇಯಾ ಅಥವಾ ಆ ಜಾಗ ಯಾರೊಬ್ಬರ ಖಾಸಗಿ ಆಸ್ತಿನಾ.? ಇಲ್ಲ ಅರಣ್ಯ ಇಲಾಖೆಗೆ ಸೇರಿದ್ದ ಈ ಎಲ್ಲದರ ಬಗ್ಗೆ ಸಮಗ್ರ ತನಿಖೆ ನಡೆಸುವ ಮೂಲಕ ಇನ್ನಷ್ಡು ಜೀವ ಬಲಿ ಪಡೆಯುವ ಮೊದಲು ಕ್ರಮ ಜರುಗಿಸಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.