www suddibindu.in
ಹುಬ್ಬಳ್ಳಿ : ಕುಡಿದ ಮತ್ತಿನಲ್ಲಿ ಮನೆಯಲ್ಲಿ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ವೇಳೆ ಸಮಯಕ್ಕೆ ಸರಿಯಾಗಿ ಬಂದ ಪೊಲೀಸರು ಕುಣಿಕೆಯಲ್ಲಿದ್ದ ವ್ಯಕ್ತಿಯ ಜೀವ ಉಳಿಸಿರುವ ಘಟನೆ ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದಲ್ಲಿ ಸಂಭವಿಸಿದೆ.
ಡಿಆರ್ನ ಸಂಗನಗೌಡ ಅವರು ಚಲಾಯಿಸುತ್ತಿದ್ದ 112ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ ಹೆಂಬ್ಲಿ ಕೂಡಿಕೊಂಡು ನೆಲ್ಲಿಹರವಿ ಗ್ರಾಮದ 46 ವರ್ಷದ ಶಂಭುಲಿಂಗಯ್ಯ ಹುಲಸೋಗಿ ಎಂಬಾತನನ್ನ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ
ಪೊಲೀಸರ ಈ ಕಾರ್ಯಕ್ಕೆ ಕಲಘಟಗಿ ಠಾಣೆ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಕ್ಷಣೆಗೊಳಗಾದ ಶಂಭುಲಿಂಗಯ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.