suddibindu.in
Siddapur:ಸಿದ್ದಾಪುರ : (uttar kannada)ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿ ಹರಡುತ್ತಿದ್ದು,ಒಂದೆ ವಾರದಲ್ಲಿ ಇಬ್ಬರೂ ಮಹಿಳೆಯರು ಮೃತಪಟ್ಟಿದ್ದಾರೆ. ಇದೀಗ ಸಿದ್ದಾಪುರ ತಾಲೂಕಿನ ಕೋರ್ಲಕ್ಯ ಗ್ರಾಮದ 60 ವರ್ಷದ(Woman Death,) ಮಹಿಳೆ ಸಾವನ್ನಪ್ಪಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಸಿದ್ದಾಪುರ ತಾಲೂಕಿನಲ್ಲೇ 65 ವರ್ಷದ ಮಹಿಳೆ ಸಾವನ್ನಪ್ಪಿದ್ದರು.ಇದಾದ ಬೆನ್ನಲ್ಲೆ ಇದೀಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ 60ವರ್ಷದ ಮಹಿಳೆ ಸಹ ಮಂಗನಕಾಯಿಲೆಗೆ ಬಲಿಯಾಗಿದ್ದಾಳೆ. ಇದರಿಂದಾಗಿ ಸಿದ್ದಾಪುರ ಸೇರಿದಂತೆ ಜಿಲ್ಲಾದ್ಯಂತ ಇದೀಗ ಮಂಗನ ಕಾಯಿಲೆ ಆತಂಕ ಎದುರಾಗಿದೆ.
- ಅಪಘಾತ ನಿಯಂತ್ರಣಕ್ಕೆ ಕುಮಟಾದಲ್ಲಿ ಬಿಗ್ ಆಕ್ಷನ್ : ನಿಯಮ ಮೀರಿ ವಾಹನ ಓಡಿಸಿದ್ರೆ ಕಾನೂನು ಕ್ರಮ
- ಸುಗಮವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಲು ಎಸ್ಪಿಗೆ ರೂಪಾಲಿ ನಾಯ್ಕ ಮನವಿ
- ದಿನಕರ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಬಂಧನ
ಕಳೆದ ಕೆಲ ದಿನಗಳಿಂದ ಜನರಲ್ಲಿ ಜ್ವರ ಸಹ ಕಾಣಿಸಿಕೊಳ್ಳುತ್ತಿದೆ. ಯಾವ ಕಾರಣಕ್ಕಾಗಿ ಜ್ವರ ಕಾಣಿಸಿಕೊಳ್ಳುತ್ತಿರುವುದು ಜನರನ್ನ ಆತಂಕಕ್ಕೆ ಒಳಗಾವುವಂತೆ ಮಾಡಿದೆ. ಕಾಯಿಲೆ ದಿನೆ ದಿನೆ ಹೆಚ್ಚಾಗುತ್ತಿರುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಹ ಕ್ರಮವನ್ನ ತೆಗೆದುಕೊಂಡಿದೆ. ಆದರೂ ಸಹ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಕಳೆದ ಬಾರಿ ಸಹ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದರೂ ಯಾವುದೇ ಸಾವು ಆಗಿರಲಿಲ್ಲ. ಆದರೆ ಇದೀಗ ಒಂದೇ ವಾರದಲ್ಲಿ ಇಬ್ಬರೂ ಸಾವನ್ನಪ್ಪಿರುವುದು ಜಿಲ್ಲೆಯ ಜನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.