suddibindu.in
Karwar: ಉತ್ತರ ಕನ್ನಡ(uttar kannada)ಜಿಲ್ಲೆಯ ಕಾರವಾರದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆಯಾಗುತ್ತಿದೆ.ಕಳೆದ ಒಂದು ವಾರದಿಂದ ಕಡಲನಗರಿ ಕಾರವಾದಲ್ಲಿ ಬಿಸಲ ನಗರದಿ ಕಲಬುರ್ಗಿಯನ್ನ ಮಿರಿಸುವಂತಾಗಿದೆ. ಅತೀ ಹೆಚ್ಚು 36ಸೆಲ್ಸಿಯಸ್ ತನಕ ತಾಪಮಾನ (temperature)ಏರಿಕೆ ಕಂಡಿದೆ.
ಕಾರವಾರ ನಗರ ಸೇರಿದಂತೆ ಕರಾವಳಿ(Karavali) ಜಿಲ್ಲೆಗಳಾದ ಮಂಗಳೂರು ಹಾಗೂ ಉಡುಪಿಯಲ್ಲಿಯೂ ಸಹ ತಾಪಮಾನ(weather)ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ.ಹವಮಾನ ಏರಿಕೆಯಾಗುತ್ತಿರುವ ಬಗ್ಗೆ ಭಾರತೀಯ ಹವಮಾನ (climate) ಇಲಾಖೆ ತಾಪಮಾನವನ್ನ ಸಂಗ್ರಹಿಸಿಕೊಳ್ಳುತ್ತಿದೆ. ಕಾರವಾರ ಸೇರಿದಂತೆ ಕರಾವಳಿ ತಾಲೂಕಿನ ಪ್ರವಾಸಿ ತಾಣಗಳು ಹೆಚ್ಚಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು, ಬರುವ ಪ್ರವಾಸಿಗರು ತಂಪು ಪಾನಿಯದ ಮೊರೆ ಹೊಗುತ್ತಿದ್ದಾರೆ.
- ಮರಕ್ಕೆ ಗುದ್ದಿದ ಸಿಲೆಂಡರ್ ತುಂಬಿದ ವಾಹನ : ವಾಹನದೊಳಗೆ ಸಿಲುಕಿಕೊಂಡ ಚಾಲಕ
- ಏ.11ರಿಂದ ಶಿವಶಂಕರ್ ನೆನಪಿನ ಮಕ್ಕಳ ಬೇಸಿಗೆ ಶಿಬಿರ ” ಕಲರವ -2025″
- ಮಾರ್ಚ್ 28ಕ್ಕೆ ಶಿರಸಿ ನೂತನ್ ಬಸ್ ನಿಲ್ದಾಣ ಉದ್ಘಾಟನೆ
ಇನ್ನೂ ಕಳೆದ ಮೂರನಾಲ್ಕುದಿಗಳಿಂದ ಜಿಲ್ಲೆಯ ಅಂಕೋಲಾ, ಕುಮಟಾ,ಹೊನ್ನಾವರ ಭಾಗದಲ್ಲಿ ಚಳಿ ಉಂಟಾಗುತ್ತಿದೆ.ರಾತ್ರಿ ವೇಳೆಯಲ್ಲಿ ಇದ್ದ ತಣ್ಣಗಿನ ವಾತಾವಣ ಬೆಳಗ್ಗಾಗುತ್ತಿರುವಂತೆ ಏರಿಕೆಯಾಗುತ್ತಿದೆ. ಏಪ್ರಿಲ್, ಮೇ ತಿಂಗಳಲ್ಲಿ ಉಂಟಾಗಬೇಕಾಗಿರುವ ತಾಪಮಾನಕ್ಕಿಂತ ಎರಡು ತಿಂಗಳು ಮೊದಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.ಇದರಿಂದಾಗಿ ಜನರ ಆರೋಗ್ಯದ ಮೇಲೆ ಸಹ ಪರಿಣಾಮ ಉಂಟಾಗುತ್ತಿದೆ. ಒಂದೇ ಸಮನೆ ತಾಪಮಾನದಲ್ಲಿ ಏರಿಕೆ ಉಂಟಾಗುತ್ತಿರುವುದರಿಂದ ಜ್ವರ ಹಾಗೂ ನೆಗಡಿ ಕಾಣಿಸಿಕೊಳ್ಳುತ್ತಿದೆ.
ಇತ್ತೀಚಿನ ವರ್ಷದಲ್ಲಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಾಂಕ್ರೀಟ ರಸ್ತೆ ಹಾಗೂ ಕಟ್ಟಡಗಳು ಹೆಚ್ಚಾಗುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಎಷ್ಟೆ ಮಳೆಯಾದರೂ ಮಳೆ ನೀರು ಭೂಮಿಯನ್ನ ಸರಿಯಾಗಿ ಸೇರಿಕೊಳ್ಳ ದಂತಾಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ತಾಪಮಾನ ಸಹ ಏರಿಕೆಯಾಗುವಂತಾಗಿದೆ. ಈಗಲೇ ಜಿಲ್ಲೆಯ ಕರಾವಳಿಯಲ್ಲಿ ಗರಿಷ್ಠ ತಾಪಮಾನ ಏಪ್ರಿಲ್, ಮೇ ತಿಂಗಳಲ್ಲಿ ಇನ್ನೂ ಹೆಚ್ಚಿನ ತಾಪಮಾನ ಉಂಟಾಗುವ ಸಾಧ್ಯತೆ ಇದೆ..