ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಾಗದಗಳಲ್ಲಿ ಖರೀದ ಆಹಾರ ಪದಾರ್ಥಗಳನ್ನ ಕೊಡುವುದು ಸಹ ಕ್ಯಾನ್ಸರ್ ಹರಡಲು ಕಾರಣ ಎನ್ನಲಾಗಿದೆ. ಕಾಗದಗಳಲ್ಲಿ ಆಹಾರ ಕೊಡದದಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ ಎಸ್ ಎಸ್ ಎಐ) ಮೊದಲಿನಿಂದಲ್ಲೂ ಮಾರಾಟಗಾರರಿಗೆ ಎಚ್ಚರಿಕೆ ನೀಡುತ್ತಲೆ ಬರುತ್ತಿದೆ. ಆದರೂ ಜನ ಮಾತ್ರ‌ ಇನ್ನೂ ಎಚ್ಚೆತ್ತುಕೊಂಡಿಲ್ಲ.

ಆಹಾರವನ್ನು ಸುತ್ತಲು, ಪ್ಯಾಕಿಂಗ್ ಮಾಡಲು ಮತ್ತು ಬಡಿಸಲು ದಿನಪತ್ರಿಕೆಗಳನ್ನು ಬಳಕೆ ಮಾಡುವುದು ಸಾಮಾನ್ಯವಾಗಿದೆ. ಇದು ಆಹಾರ ಸುರಕ್ಷತೆಯ ಅಪಾಯವಾಗಿದೆ. ದಿನಪತ್ರಿಕೆಗಳಲ್ಲಿ ಆಹಾರವನ್ನು ಸುತ್ತುವುದು ಅನಾರೋಗ್ಯಕರ ಅಭ್ಯಾಸವಾಗಿದೆ ಮತ್ತು ಆಹಾರವನ್ನು ಆರೋಗ್ಯಕರವಾಗಿ ಬೇಯಿಸಿದರೂ ಅಂತಹ ಆಹಾರದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸಣ್ಣ ಸಣ್ಣ ಅಂಗಡಿಕಾರರು, ಹೋಟೆಲ್‌ಗಳಲ್ಲಿ ಹಾಗೂ ಮನೆಗಳಲ್ಲೂ ಸಹ ಎಣ್ಣೆಯಲ್ಲಿ ಖರೀದ ಪದಾರ್ಥವನ್ನ ಕಾಗದಗಳಲ್ಲಿ ಹಾಕಲಾಗಿಡಲಾಗುತ್ತದೆ.

ಮುದ್ರಣಕ್ಕಾಗಿ ಬಳಸುವ ಶಾಯಿಗಳಲ್ಲಿ ‘ಸೀಸ’ ಹಾಗೂ ಇನ್ನಿತರ ರಾಸಾಯನಿಕ ಇರುವುದರಿಂದ ಇದು ಆಹಾರದಗಳ ಮೂಲಕ ಮನುಷ್ಯ ದೇಹದೊಳಗೆ ಸೇರುವ ಸಾಧ್ಯತೆ ಇದೆ.ಇದರಿಂದಾಗಿ ಗಂಭೀರವಾಗಿರುವ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಅದು ಕ್ಯಾನ್ಸರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.ಇದರಿಂದಾಗಿ ಆಹಾರವನ್ನ ಮುದ್ರಣ ಪತ್ರಿಕೆಯಲ್ಲಿ ಕೊಡಬಾರದು ಎಂದು ಈ ಹಿಂದೆ ಸಹ ಎಫ್ ಎಸ್ ಎಸ್ಎಐ ಸಲಹೆ ನೀಡಿತ್ತು. ಆಹಾರದಲ್ಲಿರುವ ಎಣ್ಣೆ ಅಂಶ ಮುದ್ರಿತ ಕಾಗದಗಲ್ಲಿ ಬಲಸಲಾದ ಶಾಯಿ ಜೊತೆಗೆ ಬೆರೆತು ರಾಸಾಯನಿಕಗಳನ್ನ‌ ಹೀರಿಕೊಳ್ಳಲಿದೆ. ಇದರಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗಲಿದೆ.

ಕಾಗದದಲ್ಲಿ ವಿಷಪೂರಿತ ಶಾಯಿ(ಇಂಕ್) ಇರುತ್ತಿದ್ದು, ಖರೀದ ಆಹಾರ ಆ ಪ್ರಿಂಟಿಂಗ್ ಕಾಗದಗಳಲ್ಲಿ ಹಾಕಿದಾಗ ಆಹಾರ ಆ ವಿಷಪೂರಿತ ಇಂಕ್ ಹಿರಿಕೊಳ್ಳುತ್ತದೆ‌.ಇದನ್ನ ಸೇವನೆ ಮಾಡಿದರೆ ಅದು ಮನುಷ್ಯರ ದೇಹದೊಳಗೆ ಸೇರಿಕೊಂಡು ನಿಧಾನವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವಂತೆ ಮಾಡುತ್ತದೆ. ವೃದ್ಧರು, ಹದಿಹರೆಯದವರು, ಮಕ್ಕಳ ದುಷ್ಪರಿಣಾಮ ಉಂಟಾಗುವಂತೆ ಮಾಡುತ್ತದೆ. ಪ್ಯಾಕ್ ಮಾಡಿದ ಆಹಾರವನ್ನ ಹೆಚ್ಚಾಗಿ ಸೇವನೆ ಮಾಡಿದರೆ ಕ್ಯಾನ್ಸರ್-ಸಂಬಂಧಿತ ಆರೋಗ್ಯ ಸಮಸ್ಯೆಗಳು ಉಂಟಾಗಲಿದೆ.

ಈ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಆಹಾರ ಪ್ಯಾಕೇಜಿಂಗ್ ವಸ್ತುವಾಗಿ ದಿನಪತ್ರಿಕೆಯನ್ನು ಬಳಸುವುದನ್ನು ತಡೆಯುವ ತುರ್ತು ಅಗತ್ಯವಿದೆ. ಆಹಾರ ಸಾಮಗ್ರಿಗಳ ಪ್ಯಾಕಿಂಗ್‌ಗೆ ದಿನಪತ್ರಿಕೆಗಳ ಬಳಕೆಯನ್ನು ನಿರ್ಬಂಧಿಸಲು ಮತ್ತು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.