ಸುದ್ದಿಬಿಂದು ಬ್ಯೂರೋ
ಅಂಕೋಲಾ :ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಮಹಿಳೆಯರ ನಾಪತ್ತೆ ಪ್ರಕರಣ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಕಳೆದ ಒಂದೇ ತಿಂಗಳಲ್ಲಿ ಐವರು ನಾಪತ್ತೆಯಾಗಿದ್ದು,ಕೆಲವರು ಪತ್ತೆಯಾಗಿದ್ದರೆ. ಅದರ.ಬೆನ್ನಲ್ಲೇ ಇದೀಗ ಓರ್ವ ವಿವಾಹಿತ ಮಹಿಳೆ ಮಗನೊಂದಿಗೆ ನಾಪತ್ತೆಯಾಗಿರುವ ಘಟನೆ ಅಂಕೋಲಾ ತಾಲೂಕಿನ ಲಕ್ಷ್ಮೀಶ್ವರದಲ್ಲಿ ನಡೆದಿದೆ.

ಸೈಯದ ಗಜಾಲಾ ಸೈಯದ್ ಮಹ್ಮದ್ ಇಖ್ಬಾಲ ಪೀರಜಾದೆ (43) ಎಂಬಾಕೆ ತನ್ನ 4 ವರ್ಷದ 6ತಿಂಗಳ ಮಗನೊಂದಿಗೆ ನಾಪತ್ತೆಯಾಗಿದ್ದಾಳೆ. ಇದೇ ತಿಂಗಳ 22ರಂದು ಮನೆಯಿಂದ ಹೋದವಳು ವಾಪಸ್ ಬಾರದೆ ಎಲ್ಲಿಯೋ ಹೋಗಿ ನಾಪತ್ತೆಯಾಗಿದ್ದಾಳೆ.
ಈ ಬಗ್ಗೆ ನಾಪತ್ತೆಯಾಗಿರುವ ಮಹಿಳೆಯ ಪತಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,ನಾಪತ್ತೆಯಾಗಿರುವ ಪತ್ನಿ ಹಾಗೂ ಮಗನಿಗೆ ಪತ್ತೆ ಮಾಡಿಕೊಡುವಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.