ಸುದ್ದಿಬಿಂದು ಬ್ಯೂರೋ
ಕುಮಟಾ
: ತಾಲೂಕಾ ನಾಮಧಾರಿ ಸಮಾಜದ ಯುವ ನಾಮಧಾರಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ರಾಜೇಶ ಎಂ. ನಾಯ್ಕ, ಬರ್ಗಿ ಆಯ್ಕೆಗೊಂಡಿದ್ದಾರೆ‌.

ಯುವ ನಾಮಧಾರಿ ಸಂಘದ ಪದಾಧಿಕಾರಿಗಳ ಆಯ್ಕೆಕುಮಟಾ ನಾಮಧಾರಿ ಮಾತೃ ಸಂಘದ ನೇತೃತ್ವದಲ್ಲಿ ನಾಮಧಾರಿ ಸಭಾಭವನದಲ್ಲಿ ನಡೆಯಿತು.

ವೈಭವ ನಾಯ್ಕ, ಕೋನಳ್ಳಿ ಉಪಾಧ್ಯಕ್ಷರಾಗಿ, ದತ್ತಾತ್ರೇಯ ನಾಯ್ಕ, ಹೆಗಡೆ ಕಾರ್ಯದರ್ಶಿಯಾಗಿ, ನಿತಿನ್ ನಾಯ್ಕ, ಮೂರೂರು, ಸಹ ಕಾರ್ಯದರ್ಶಿಯಾಗಿ, ವಿಷ್ಣು ನಾಯ್ಕ, ಅಘನಾಶಿನಿ, ಕೋಶಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಕುಮಟಾ ಆರ್ಯ, ಈಡಿಗ, ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಕೋಶಾಧ್ಯಕ್ಷ ಕಮಲಾಕರ‌ ನಾಯ್ಕ, ಸಂಘಟನಾ ಕಾರ್ಯದರ್ಶಿ ಸಂತೋಷ ನಾಯ್ಕ, ನಿರ್ದೇಶಕರಾದ ಸುಬ್ರಾಯ ನಾಯ್ಕ, ನಾಗೇಂದ್ರ ನಾಯ್ಕ, ಚಂದ್ರಹಾಸ ನಾಯ್ಕ, ರಾಮ ಸೇವಾ ಸಮಿತಿಯ ತಾಲೂಕಾ ಅಧ್ಯಕ್ಷರಾದ ಎಚ್. ಆರ್. ನಾಯ್ಕ, ಸಮಾಜದ ಹಿರಿಯರಾದ ನಾಗೇಶ ನಾಯ್ಕ, ಕಲಭಾಗ, ಯುವ ನಾಮಧಾರಿ ಸಂಘದ ನಿಕಟ ಪೂರ್ವ ಅಧ್ಯಕ್ಷ ವಿನಾಯಕ ನಾಯ್ಕ, ಮಾಜಿ ಅಧ್ಯಕ್ಷ ಮಾರುತಿ ನಾಯ್ಕ, ಮಾಜಿ ಕಾರ್ಯದರ್ಶಿ ಪ್ರಮೋದ್ ನಾಯ್ಕ ಹಾಗೂ ಇನ್ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ವಿವಿಧ ಭಾಗದ ನಾಮಧಾರಿ ಯುವಕರು ಈ ಸಂದರ್ಭ ಹಾಜರಿದ್ದರು.