ಸುದ್ದಿಬಿಂದು ಬ್ಯರೋ ವರದಿ
ಕಾರವಾರ : ಸರಕಾರಿ ರಜೆ ಬಂತು ಅಂದರೆ ಜನಗಳ ಓಡಾಟವಿಲ್ಲದೆ ಕಾರವಾರ ನಗರದ ಬಹುತೇಕ ರಸ್ತೆಗಳು ಬಿಕೋ ಎನ್ನುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ.

ಸರಕಾರಿ ರಜೆಗಳು ಹೊರತು ಪಡಿಸಿ ಪ್ರತಿನಿತ್ಯ ಜಿಲ್ಲೆಯ ನಾನಾ ಕಡೆಯಿಂದ ಸಾವಿರಾರು ಜನ ಖಾಗದ ಪತ್ರ ವ್ಯವಹಾರ ಸೇರಿದಂತೆ ಸಾಕಷ್ಟು ಜನ ಜಿಲ್ಲಾ ಕೇಂದ್ರ ಕಾರವಾರಕ್ಕೆ ಬರತ್ತಿರತ್ತಾರೆ. ಹೀಗಾಗಿ ನಗರದ ರಸ್ತೆಗಳು ಜನರ ಓಡಾಟದಿಂದ ತುಂಬಿಕೊಂಡಿರುತ್ತದೆ. ಜೊತೆಗೆ ವ್ಯಾಪಾರ ವಹಿವಾಹಟುಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಜನರ ಓಡಾಟವಿರುವ ಕಾರಣ ಜಿಲ್ಲೆಯ ಬೇರೆ ಭಾಗದಿಂದ ಹೂವು,ಹಣ್ಣು ವ್ಯಾಪಾರಸ್ಥರು ಸಹ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಕ್ಕೆ ಕಾರವಾರಕ್ಕೆ ಬರುತ್ತಾರೆ.

ಆದರೆ ಸರಕಾರಿ ರಜೆಗಳು ಬಂದರೆ ಬೇರೆ ಬೇರೆ ಕಡೆಯಿಂದ ಕಾರವಾರಕ್ಕೆ ಬರುವ ವ್ಯಾಪಾರಸ್ಥರು ಸಹ ಇಲ್ಲಿಗೆ ಬರೋದಕ್ಕೆ ಮನಸ್ಸು ಮಾಡುತ್ತಿಲ್ಲ. ಸರಕಾರಿ ರಜೆಗಳ ದಿನದಲ್ಲಿ ಇಲ್ಲಿಗೆ ಬಂದರೆ ಉಳಿದ ದಿನದಷ್ಟು ವ್ಯಾಪಾರ ನಡೆಯುವುದಿಲ್ಲ ಎನ್ನುವ ಕಾರಣಕ್ಕೆ ಬೀದಿ ಬದಿಯಲ್ಲಿ ಹೂವು,ಹಣ್ಣು,ಕಾಯಿ ವ್ಯಾಪಾರಸ್ಥರು ಸಹ ಕಾರವಾರ ನಗರದಿಂದ ದೂರ ಇರೋದು ಸಾಮಾನ್ಯವಾಗಿದೆ.

ಜಿಲ್ಲೆಯ ಬೇರೆ ಬೇರೆ ನಗರ,ಪಟ್ಟಣಗಳಲ್ಲಿ ಸದಾ ಜನರ ಓಡಾಟ ಇದ್ದರೆ ಕಾರವಾರ ನಗರದಲ್ಲಿ ಮಾತ್ರ ಸರಕಾರಿ ರಜೆಗಳಲ್ಲಿ ಜನಗಳ ಓಡಾಟ ಇಲ್ಲದೆಇರುವುದು ಮಾತ್ರ ಸಾಮಾನ್ಯವಾಗಿದೆ.ಕರೋನಾ ಸಮಯದಲ್ಲಿ ಲಾಕ್ ಡೌನ್ ಆದ ಪರಿಸ್ಥಿತಿ ಕಾರವಾರ ನಗರದಲ್ಲಿ ಕಂಡು ಬರೋದು ಸಾಮಾನ್ಯವಾಗಿದೆ.

ಇದನ್ನೂ ಓದಿ