ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದ ಎಯರ್ ಗನ್ ಗುಂಡು ಸಿಡಿತದಿಂದ 9 ವರ್ಷದ ಬಾಲಕ ಸಾವನ್ನಪ್ಪಿದ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಮೃತ ಬಾಲಕ ತಾಯಿ ದೂರಿನ ಆಧಾರದ ಮೇಲೆ ಓರ್ವನನ್ನ ಬಂಧಿಸಲಾಗಿದ್ದು, ಇನ್ನೋರ್ವ ವ್ಯಕ್ತಿಯನ್ನ ವಶಕ್ಕೆ ಪಡೆಯಲಾಗಿದೆ. .

ಘಟನೆಯಲ್ಲಿ ಮೃತಬಾಲಕ ಕರಿಯಪ್ಪ (9)ನ ತಾಯಿ ಪವಿತ್ರಾ ಉಂಡಿ ಅವರು ತಮ್ಮ ಮಗನನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನಿತೀಶ್ ಗೌಡ ಎಂಬಾತ ಪದೆ ಪದೆ ಬಂದು ಮಕ್ಕಳಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದ. ಇಂದು ಸಹ ಮಕ್ಕಳು ಆಟ ಆಡುತ್ತಿದ್ದ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ತಮ್ಮ ಮಗನ ಎದೆಗೆ ಎಯರ್ ಗನ್‌ನಿಂದ ಗುಂಡು ಹೊಡೆದು ಕೊಲೆ ಮಾಡಿದ್ದಾನೆ ಎಂದು ಅವರು ದೂರಿನಲ್ಲಿ ಪವಿತ್ರಾ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಗನ್ ಮಾಲಿಕ ರಾಘವ ಹೆಗಡೆ ಹಾಗೂ ಗನ್ ಉಪಯೋಗಿಸಿದ್ದ ನಿತೀಶ್ ಗೌಡ ವಿರುದ್ಧ ಪ್ರಕರಣ‌ ದಾಖಲಿಸಿಕೊಂಡ ಶಿರಸಿ ಗ್ರಾಮೀಣ ಪೊಲೀಸರು ಆರೋಪಿತನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ‌.

ಇದನ್ನೂ ಓದಿ : ಮೊಬೈಲ್ ಬಿಡಿ-ಪುಸ್ತಕ ಹಿಡಿ: ಶಿಕ್ಷಕರಿಗೆ-_ವಿದ್ಯರ್ಥಿಗಳಿಗೆ ಸಿಎಂ ಕರೆ