ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಮನೆಕೆಲಸದ ಮಹಿಳೆಯ ಮೇಲೆ ನಡೆದ  ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಘೋಷಿಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಇಂದು ನ್ಯಾಯಾಲಯ ಜೀವಾವಧಿ ಶಿಕ್ಷೆ 5ಲಕ್ಷ ದಂಡ ವಿಧಿಸಿದೆ.

ನಿನ್ನೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ದೋಷಾರೋಪಣೆ ದೃಢಪಡಿಸಿದ ತಕ್ಷಣವೇ ಪ್ರಜ್ವಲ್ ಭಾವೋದ್ವಿಗ್ನರಾಗಿ ಕಣ್ಣೀರು ಹಾಕಿದ್ದರು. ಇಂದು ಶಿಕ್ಷೆ ಪ್ರಕಟಿಸುವ ವೇಳೆ, ಅಭಿಯೋಜಕರು ಕನಿಷ್ಠ 10 ವರ್ಷಗಳ ಗರಿಷ್ಠ ಜೀವಾವಧಿ ಶಿಕ್ಷೆ ನೀಡಬೇಕೆಂದು ಕೋರಿದರು. ಆದರೆ ಪ್ರಜ್ವಲ್ ರೇವಣ್ಣ ತಾವು ನಿರ್ದೋಷಿ ಎಂದು ಕೋರ್ಟ್ ಮುಂದೆ ಮನವಿ ಮಾಡಿದರು. ಅವರ ಪರ ವಕೀಲ ನಳಿನಿ ಮಾಯಾ ಗೌಡ ಅವರು ಸಹ ಶಿಕ್ಷೆ ತಗ್ಗಿಸುವಂತೆ ವಿನಂತಿಸಿದರು.

ನ್ಯಾಯಾಲಯವು ಎಲ್ಲದಕ್ಕೂ ತೂಕಮಾಪನ ಮಾಡಿ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಮನೆಕೆಲಸದ ಮಹಿಳೆ ನೀಡಿದ ದೂರು ಆಧಾರಿತ ಈ ಪ್ರಕರಣದಲ್ಲಿ ಮಾತ್ರ ಆರೋಪ ಸಾಬೀತಾಗಿದೆ. ಉಳಿದ ಮೂರು ಪ್ರಕರಣಗಳು ಇನ್ನೂ ವಿಚಾರಣೆಯಲ್ಲಿವೆ.ಈ ಸಂಬಂಧ ಕೋರ್ಟ್ ಇಂದು 424 ಪುಟಗಳ ವಿವರವಾದ ತೀರ್ಪು ಹೊರಡಿಸಿದೆ.

ಇದನ್ನೂ ಓದಿ:Murder/ಹೆಣ್ಣಿನ ವಿಚಾರಕ್ಕೆ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಹತ್ಯೆ : ನದಿಗೆ ಎಸೆದ ಹಂತಕರು