ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ:ಪೋಷಕರ ನಿರ್ಲಕ್ಷದಿಂದಾಗಿ ಎರಡು ವರ್ಷದ ಮಗು ಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ನಗರದ ಆಝಾದ ನಗರದಲ್ಲಿ ನಡೆದಿದೆ.
ತೌಸೀಫ್ ಮತ್ತು ಅರ್ಜು ದಂಪತಿಯ ಎರಡು ವರ್ಷದ ಪುಟ್ಟ ಮಗು ಮೃತಪಟ್ಟವಳಾಗಿದ್ದಾಳೆ. ಆಕೆ ಮನೆ ಎದುರು ಆಟವಾಡುತ್ತಾ ಮನೆ ಎದುರಿಗೆ ಇದ್ದ ಕಾಲುವೆ ಬಳಿ ಹೋಗಿದ್ದಾಳೆ. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕಾಲುವೆಯಲ್ಲಿ ಬಿದ್ದು ಮಗು ಮೃತಪಟ್ಟಿದ್ದಾಳೆ. ಪುಟ್ಟ ಮಗು ಕಾಲುವೆಗೆ ಬಿಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೋಷಕರ ನಿರ್ಲಕ್ಷದಿಂದಾ ಮಗು ಸಾವನ್ನಪಿದೆ.
ಇದನ್ನೂ ಓದಿ