ಬೆಂಗಳೂರು : ಕಳೆದ ಕೆಲ ದಿನಗಳಿಂದ ಇಳಿಕೆಯಾಗಿದ್ದ ಬಂಗಾರದ ಬೆಲೆ ಇಂದು ಬುಧವಾರ ಏಪ್ರಿಲ್ 16 ರಂದು ಭಾರತದಲ್ಲಿ ಚಿನ್ನದ ಬೆಲೆ ಇತಿಹಾಸದ ಗರಿಷ್ಠ ಮಟ್ಟ ತಲುಪಿದ್ದು 95ಸಾವಿರ ಗಡಿ ದಾಟಿದೆ.
ದೇಶೀಯ ಭವಿಷ್ಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರಥಮವಾಗಿ 95,000 ಸಾವಿರ ಗಡಿ ದಾಟಿದೆ. ಮಲ್ಟಿ ಕಾಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ, ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 95,090ಸಾವಿರ ಗರಿಷ್ಠ ಮಟ್ಟ ತಲುಪಿತು. ನಂತರ, ಮಧ್ಯಾಹ್ನ 1:04 ಕ್ಕೆ ಅದು 1.66% ಇಳಿವಣಿಗೆ ಹೊಂದಿ 95,000 ಸಾವಿರ ಕ್ಕೆ ತಲುಪಿತು.
ಬೆಳ್ಳಿಯ ಬೆಲೆಯೂ ಹೆಚ್ಚಾಗಿ, ದಿನದ ಗರಿಷ್ಠ 96,253 ತಲುಪಿದ ನಂತರ 1.56% ಏರಿಕೆಯಾಗಿದ್ದು ಪ್ರತಿ ಕೆ.ಜಿ ಗೆ 96,344 ತಲುಪಿದೆ.
ಚಿನ್ನದ ಬೆಲೆಯ ಏರಿಕೆ
ಬೆಂಗಳೂರು ನಗರದಲ್ಲಿ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಇಳಿಮುಖವಾಗಿತ್ತು. ಆದರೆ ಇಂದು, ಬುಧವಾರ ಅಚಾನಕ್ ಏರಿಕೆಯಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 950ರೂಪಾಯಿ ಹೆಚ್ಚಾಗಿ 88,150ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆಯೂ 990ರೂಪಾಯಿ ಹೆಚ್ಚಾಗಿ 96,170 ಆಗಿದೆ. ಇದರಿಂದಾಗಿ ಚಿನ್ನದ ಬೆಲೆ ಗರಿಷ್ಠ ಮಟ್ಟ ತಲುಪಿದೆ.
ಬೆಳ್ಳಿಯ ಬೆಲೆ ಹೇಗಿದೆ?
ಇಂದು ಮಾರುಕಟ್ಟೆಯಲ್ಲಿ ಬೆಳ್ಳಿಯ ಪ್ರತಿ ಕೆ.ಜಿ ಬೆಲೆ 1,00,000 ರೂ ಆಗಿದೆ. ಬೆಂಗಳೂರು ನಗರದಲ್ಲಿ ಇಂದಿನ ಬೆಳ್ಳಿಯ ಬೆಲೆಗಳು: 10 ಗ್ರಾಂಗೆ 1,000,ರೂ 100 ಗ್ರಾಂಗೆ 10,000 ರೂ ಮತ್ತು 1000 ಗ್ರಾಂ (1 ಕೆ.ಜಿ) ಗೆ 1,00,000.ರೂ
ದೇಶದ ಇತರ ಪ್ರಮುಖ ನಗರಗಳಲ್ಲಿ 1 ಕೆ.ಜಿ ಬೆಳ್ಳಿಯ ಬೆಲೆ: ಚೆನ್ನೈಯಲ್ಲಿ 1,10,000, ರೂ ದೆಹಲಿಯಲ್ಲಿ 1,00,000, ರೂ ಮುಂಬೈಯಲ್ಲಿ 1,00,000 ರೂ ಮತ್ತು ಕೋಲ್ಕತಾದಲ್ಲಿ 1,00,000.ರೂ
ಇದನ್ನೂ ಓದಿ