ಕಾರವಾರ: ನಗರದ ಸಾಯಿಕಟ್ಟಾದ ಸಾಯಿಮಂದಿರದಲ್ಲಿ ನಿನ್ನೆ ತಡರಾತ್ರಿ ಕಳ್ಳರು ಕೈಚಳಕ ತೋರಿದ್ದು ದೇವಾಲಯದ ಬಾಗಿಲು ಮುರಿದು ಸುಮಾರು 12 ಕೆ.ಜಿ ಗೂ ಅಧಿಕ ಬೆಳ್ಳಿಯ ಆಭರಣ ದೋಚಿದ್ದಾರೆ.
ನಿನ್ನೆ ಸಾಯಿಮಂದಿರದ ಎದರುಗಡೆಯ ಮೈದಾನದಲ್ಲಿ ಕ್ರಿಟೇಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಈ ಪಂದ್ಯಾವಳಿ ಸುಮಾರು ಎರಡು ಗಂಟೆಗೆ ಮುಕ್ತಾಯವಾಗಿದ್ದು ಅದರ ಬಳಿ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ. ದೇವಾಲಯದ ಬಾಗಿಲು ಮುರಿದು ಒಳ ಪ್ರವೇಶಿಸಿದ ಎರಡು ಜನ ಕಳ್ಳರು ಸಾಯಿಬಾಬ ವಿಗ್ರಹದ ಅಕ್ಕ ಪಕ್ಕದ ಎರಡು ಬೆಳ್ಳಿಯ ಸಿಂಹ, ದೇವರ ಪಾದುಕೆ ಹಾಗೂ ಬೆಳ್ಳಿ ಚತ್ರಿಯನ್ನು ಎಗರಿಸಿದ ದೃಶ್ಯ ಮಂದಿರದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮುಂಜಾನೆ ದೇವರ ಪೂಜೆಗೆ ಆಗಮಿಸಿದ ಪೂಜಾರಿ ಅವರೆಗೆ ಕಳ್ಳತನದ ಕೃತ್ಯ ಗಮನಕ್ಕೆ ಬಂದಿದ್ದು ಕಾರವಾರ ನಗರ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೋಲಿಸರು ತನಿಖೆ ಕೈಕೊಂಡಿದ್ದು ಕಳ್ಳರ ಸರೆಗೆ ಬಲೆಬೀಸಿದ್ದಾರೆ. ಕಾರವಾರ ತಾಲೂಕಿನಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಮೂರನೇ ದೇವಾಲಯ ಕಳ್ಳತನ ಪ್ರಕರಣ ಇದಾಗಿದೆ.
ಇದನ್ನ ಓದಿ