ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಒಂದು ಸಮಾಜವನ್ನು ಸಂಘಟಿಸಲು ಹಾಗೂ ಸಹಬಾಳ್ವೆನಡೆಸಲು ಪಂದ್ಯಾವಳಿಗಳು ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಎಲ್ ನಾಯ್ಕ ಹೇಳಿದರು.

ಅವರು ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ ಅಂಕೋಲಾ ವತಿಯಿಂದ ಜಿಲ್ಲಾಮಟ್ಟದ ನಾಮಧಾರಿ ಕಪ್-2025 ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಜಿಲ್ಲೆಯ ಬಹುಸಂಖ್ಯಾತ ಸಮಾಜ ಎಂದೆನಿಸಿಕೊಂಡಿರುವ ನಮ್ಮ ಸಮಾಜದಲ್ಲಿ ಎಲ್ಲಾ ವಿಭಾಗದಲ್ಲಿಯೂ ಪ್ರತಿಭೆಗಳಿದ್ದಾರೆ,ಅಂತಹ ಪ್ರತಿಭೆಗಳನ್ನು ಹೊರತರುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ವೇದಿಕೆಯಾಗಿದೆ. ನಾಮಧಾರಿ ಸಮುದಾಯ ಬಹುಸಂಖ್ಯಾತರಾಗಿದ್ದರು ಇತರ ಸಮಾಜದವರೊಂದಿಗೆ ಅನ್ಯೋನ್ಯತೆಯಿಂದ ಬದುಕುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಮಾಜದವರೊಂದಿಗೆ ಬೆರೆತು ನಾಮಧಾರಿ ಪ್ರೀಮಿಯರ್ ಲೀಗ್ ನಂತಹ ಪಂದ್ಯಾವಳಿಗಳು ರೂಪುಗೊಳ್ಳಲಿ ಹಾಗೆಯೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಾಯ ಸಹಕಾರ ನೀಡುವಂತಾಗಲಿ ಎಂದರು.

ಬಹುಮಾನ ವಿತರಕರಾಗಿ ಆಗಮಿಸಿ ಮಾತನಾಡಿದ ಯಲ್ಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ರವಿ ನಾಯ್ಕ ನಾಮಧಾರಿ ಸಮಾಜ ಎಂದೊಡನೆ ನೆನಪಿಗೆ ಬರುವುದು ಅಂಕೋಲಾ ತಾಲೂಕು, ಸದಾ ಕಾರ್ಯಶೀಲತೆಯಿಂದ ಕೂಡಿರುವ ಇಲ್ಲಿಯ ಸಮಾಜ ಬಾಂಧವರು ಧಾರ್ಮಿಕ,ಶೈಕ್ಷಣಿಕ, ಸಾಂಸ್ಕೃತಿಕ ಹೀಗೆ ಹಲವಾರು ವಿಭಾಗಗಳಲ್ಲಿ ಮುಂದಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಯಲ್ಲಾಪುರ ಪಟ್ಟಣ ಪಂಚಾಯಿತಿ ಸದಸ್ಯ ಸೋಮೇಶ್ವರ ನಾಯ್ಕ ಮಾತನಾಡಿ ಜಿಲ್ಲೆಯಾದ್ಯಂತ ಎಲ್ಲೇ ನಾಮಧಾರಿ ಸಮಾಜಕ್ಕೆ ಅನ್ಯಾಯವಾಗಿದೆ ಎಂದರೆ ತಕ್ಷಣ ನೆರವಿಗೆ ದಾವಿಸುವ ಗುಣ ಅಂಕೋಲಾ ನಾಮಧಾರಿಗಳು ಹಾಗೂ ಜಿಲ್ಲಾಧ್ಯಕ್ಷರಾದ ಮಂಜುನಾಥ್ ನಾಯ್ಕರದ್ದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಇಲ್ಲಿಯ ಸಮಾಜಬಾಂದವರು ಸಂಘಟಿತರಾಗಿದ್ದಾರೆ.ಮುಂದಿನ ದಿನಗಲ್ಲಿ ಮತ್ತಷ್ಟು ವಿಜೃಂಭಣೆಯಿಂದ ನಾಮಧಾರಿ ಕ್ರಿಕೆಟ್ ಪಂದ್ಯಾವಳಿಗಳು ರಾರಾಜಿಸಲಿ ಎಂದರು.

ಈ ಸಂದರ್ಭದಲ್ಲಿ ಅಂಕೋಲಾ ಪುರಸಭೆ ಅಧ್ಯಕ್ಷ ಸೂರಜ್ ಎಂ ನಾಯ್ಕ,ತಾಲೂಕ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ್ ನಾಯ್ಕ,ಬೆಳಕು ಪೌಂಡೇಶನ್ ಅಧ್ಯಕ್ಷೆ ಮಂಜುಳಾ ನಾಯ್ಕ,ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ತಾಲೂಕಾಧ್ಯಕ್ಷ ಮಹಾಬಲೇಶ್ವರ ನಾಯ್ಕ,ಕಾರ್ಯದರ್ಶಿ ಉಪೇಂದ್ರ ನಾಯ್ಕ,ಉಪಾಧ್ಯಕ್ಷ ರವಿ ನಾಯ್ಕ,ಗುತ್ತಿಗೆದಾರರ ಸಂಘದ ಅಧ್ಯಕ್ಷ ಮೂರ್ಕುಂಡಿ ನಾಯ್ಕ ವೇದಿಕೆಯಲ್ಲಿದ್ದು ಮಾತನಾಡಿದರು.

ಪಂದ್ಯಾವಳಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು ಎಂಟು ತಂಡಗಳು ಬಾಗವಹಿಸಿದ್ದು,ಕುಮಟಾ ನಾಮಧಾರಿ ತಂಡ ಪ್ರಥಮಸ್ಥಾನ ತನ್ನದಾಗಿಸಿಕೊಂಡಿತು,ಹಾಗೆಯೇ ಶಿರಸಿ ನಾಮಧಾರಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಸದಸ್ಯರು,ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೃಷ್ಣ ಜಿ ನಾಯ್ಕ ನಿರೂಪಿಸಿದರು, ಉಪೇಂದ್ರ ನಾಯ್ಕ ಸ್ವಾಗತಿಸಿದರು, ಮಂಜುನಾಥ್ ವಿ ನಾಯ್ಕ ವಂದಿಸಿದರು.

ಇದನ್ನೂ ಓದಿ