ಸುದ್ದಿಬಿಂದು ಬ್ಯೂರೋ ವರದಿ Suddi Bindu Digital News
ಹಾಸನ : ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಓರ್ವ ಮಹಿಳೆ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮ ಬಳಿ ನಡೆದಿದೆ.
ಶಾಂತಮ್ಮ (45) ಮೃತ ಮಹಿಳೆಯಾಗಿದ್ದಾಳೆ.ಇನ್ನೂ ಹಾಸನದ ಕೆ.ಹೊಸಕೊಪ್ಪಲು ಗ್ರಾಮದ ಮೂವರಿಗೆ ಗಂಭೀರವಾದ ಗಾಯವಾಗಿದೆ. ಬೆಂಗಳೂರು ಕಡೆಯಿಂದ ಹಾಸನ ಕಡೆಗೆ ಬರುತ್ತಿದ್ದ ಆಲ್ಟೋ ಕಾರಿಗೆ ಹಿಂಬದಿಯಿಂದ ಅತೀ ವೇಗವಾಗಿ ಬರುತ್ತಿದ್ದ ವೋಕ್ಸ್ವ್ಯಾಗನ್ ಕಾರು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಗಾಯಗೊಂಡವರನ್ನ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನೂ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ
- ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
- ಕುಮಟಾ ಸುತ್ತಮುತ್ತ ಅಕ್ರಮ ಮರಳು ದಂಧೆ : ಸೇತುವೆಗೂ ಅಪಾಯ ಸಾಧ್ಯತೆ
- ಬಾಲ್ಯದಿಂದಲ್ಲೆ ಗುಣಮಟ್ಟದ ಶಿಕ್ಷಣ ಅಗತ್ಯ : ಶಾಸಕ ದಿನಕರ ಶೆಟ್ಟಿ
- ಡಿಕೆ ಶಿವಕುಮಾರ ಅಧಿಕಾರ ಹಸ್ತಾಂತರಕ್ಕೆ ಸಿದ್ದು ಹಿಂದೇಟು ವಿಚಾರ : ಸಿದ್ದರಾಮಯ್ಯ ‘ಕುಮಾರಸ್ವಾಮಿ ಹಾದಿ’ ಹಿಡಿಯಲಿದ್ದಾರ.?
- ಪ್ರವಾಸೋದ್ಯಮ ಕಚೇರಿ ಮಂಚದ ವಿವಾದ: ದಾಖಲೆಯಿಂದ ಸತ್ಯ ಬಯಲು.!


